ಉದಯವಾಹಿನಿ, ತಿರುವನಂತಪುರಂ (ಕೇರಳ): ಒಂದು ಎಂಜಿನ್‌ನಲ್ಲಿ ಕಡಿಮೆ ಇಂಧನ, ಕಾಕ್ಪಿಟ್ನಲ್ಲಿ ಶೂನ್ಯ ಒತ್ತಡ ಉಂಟಾದ ಕಾರಣ, ಕೇರಳದ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಹಾರಾಟವಾದ ಕೆಲವೇ ನಿಮಿಷಗಳಲ್ಲಿ ತುರ್ತು ಭೂಸ್ಪರ್ಶ ಕಂಡಿದೆ.
ಟೇಕ್ ಆಫ್ ಆದ AI-830 ವಿಮಾನದ ಎರಡನೇ ಎಂಜಿನ್‌ನಲ್ಲಿ ಕಡಿಮೆ ಇಂಧನ, ಶೂನ್ಯ ಒತ್ತಡ ಇರುವುದನ್ನು ಪೈಲಟ್ಗಳು ಪತ್ತೆ ಮಾಡಿದ್ದಾರೆ. ವಿಮಾನ ಹಾಗೆಯೇ ಹಾರಾಟ ನಡೆಸಿದಲ್ಲಿ ಅಪಾಯಕಾರಿ ಎಂದು ಅರಿತ ಪೈಲಟ್ಗಳು ತಕ್ಷಣವೇ ವಾಯು ಸಂಚಾರ ನಿಯಂತ್ರಣ (ಎಟಿಸಿ) ಕೊಠಡಿಗೆ PAN- PAN ಎಚ್ಚರಿಕೆ ನೀಡಿದ್ದಾರೆ.
ತಕ್ಷಣವೇ ವಿಮಾನವನ್ನು ಇಳಿಸಲು ಅನುಮತಿ ಕೋರಿದ್ದಾರೆ. ಇದಕ್ಕೆ ಸ್ಪಂದಿಸಿದ ಎಟಿಸಿ ತಿರುವನಂತಪುರಂಗೆ ವಾಪಸ್ ಬರಲು ಸೂಚಿಸಿದೆ. ನಂತರ ವಿಮಾನವನ್ನು ಸುರಕ್ಷಿತವಾಗಿ ತುರ್ತಾಗಿ ಇಳಿಸಲಾಯಿತು. ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ವಿಮಾನದಿಂದ ಸ್ಥಳಾಂತರಿಸಲಾಯಿತು. ತಾಂತ್ರಿಕ ಪರಿಶೀಲನೆಗಾಗಿ ವಿಮಾನವನ್ನು ಭೂಮಿಗೆ ಇಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಹೇಶ್ ಗುಪ್ತನ್ ಹೇಳಿದ್ದಾರೆ.
“ಎಂಜಿನ್‌ನಲ್ಲಿ ತೈಲ ಸೋರಿಕೆಯಿಂದ ದೋಷ ಉಂಟಾಗಿದೆಯೇ ಅಥವಾ ಬೇರೆ ಕಾರಣ ಇದೆಯೇ ಎಂಬುದರ ಬಗ್ಗೆ ವಿಮಾನಯಾನ ಎಂಜಿನಿಯರ್‌ಗಳು ತನಿಖೆ ನಡೆಸುತ್ತಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ಥಾಯ್ಲೆಂಡ್ನಲ್ಲಿ ಮತ್ತೊಂದು ವಿಮಾನ ಸ್ಥಗಿತ: ಇತ್ತ ಥಾಯ್ಲೆಂಡ್ನ ಫುಕೆಟ್ ವಿಮಾನ ನಿಲ್ದಾಣದಲ್ಲಿ ಹೈದರಾಬಾದ್ಗೆ ಬರಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಸಮಸ್ಯೆ ಕಂಡು ಬಂದಿದೆ. ಇದರಿಂದ ವಿಮಾನ ಹಾರಾಟವನ್ನೇ ರದ್ದು ಮಾಡಲಾಗಿದೆ. “ಇಂದು ಥಾಯ್ಲೆಂಡ್ನ ಫುಕೆಟ್ನಿಂದ ಹೈದರಾಬಾದ್ಗೆ ಬರಬೇಕಿದ್ದ ಬೋಯಿಂಗ್ 737-ಮ್ಯಾಕ್ಸ್ 8 ವಿಮಾನದ ನೋಸ್ ವೀಲ್‌ನಲ್ಲಿ (ಮುಂದಿನ ಚಕ್ರ) ಸಮಸ್ಯೆಗೆ ತುತ್ತಾಗಿದೆ. ಹೀಗಾಗಿ, ವಿಮಾನ ಹಾರಾಟವನ್ನು ನಿಲ್ಲಿಸಲಾಗಿದೆ” ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಏನಿದು PAN- PAN ಅಲರ್ಟ್?: ಯಾವುದೇ ವಿಮಾನ ಹಾರಾಟದ ವೇಳೆ ಸಮಸ್ಯೆ ಕಂಡು ಬಂದಾಗ ಅದರ ಪೈಲಟ್ಗಳು ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ)ಗೆ ತಕ್ಷಣವೇ ಮಾಹಿತಿ ನೀಡುತ್ತಾರೆ. ಸಮಸ್ಯೆಯ ಆಧಾರದ ಮೇಲೆ ಪೈಲಟ್ಗಳು ಮೇ ಡೇ ಹಾಗೂ ಪಾನ್ ಪಾನ್ ಎಂಬ ಎಚ್ಚರಿಕೆ ನೀಡುತ್ತಾರೆ. PAN- PAN ಎಂದರೆ, ವಿಮಾನದಲ್ಲಿ ದೋಷ ಕಂಡುಬಂದಾಗ ಪ್ರಯಾಣ ಮುಂದುವರಿಸುವುದು ಅಪಾಯ ಎಂದರಿತು ತುರ್ತು ಭೂಸ್ಪರ್ಶಕ್ಕೆ ಅವಕಾಶ ನೀಡಲು ಕೋರುವುದು. MAY DAY ಎಂದರೆ, ಹಾರಾಟದ ವೇಳೆ ಇಡೀ ವಿಮಾನವೇ ಅಪಾಯಕ್ಕೀಡಾದಾಗ ತಕ್ಷಣದ ಸಹಾಯಕ್ಕಾಗಿ ನೀಡುವ ಎಚ್ಚರಿಕೆ. ಅಂದರೆ, ಎಂಜಿನ್ ಫೇಲ್, ಶೂನ್ಯ ಒತ್ತಡ, ವಿಮಾನಕ್ಕೆ ಬಾಹ್ಯ ಗಂಭೀರ ಅಪಾಯಕ್ಕೆ ತುತ್ತಾದಾಗ ಪೈಲಟ್ಗಳು ಮೇ ಡೇ ಸಂದೇಶ ನೀಡುತ್ತಾರೆ.
