ಉದಯವಾಹಿನಿ, ದಕ್ಷಿಣ ಲೆಬನಾನ್‌ನ ಯೋಹೋರ್ ಗ್ರಾಮದ ಮೇಲೆ ಇಸ್ರೇಲ್ ಭೀಕರ ರಾಸಾಯನಿಕ ದಾಳಿ ಮಾಡಿದ್ದು, ಇಡೀ ಗ್ರಾಮ ಸ್ಮಶಾನದಂತಾಗಿದೆ.
ಇಸ್ರೇಲ್ ಸೇನೆಯು ಹಿಬ್ಬುಲ್ಲಾ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಬೆಂಕಿಯ ಉಂಡೆಗಳನ್ನೇ ಸುರಿಸಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ನಿಷೇಧಿತ ‘ವೈಟ್ ಫಾಸ್ಪರಸ್’ ಬಳಸಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ದಾಳಿಗೆ ಕೇವಲ ಒಂದು ವಾರದಲ್ಲಿ ಸುಮಾರು 400 ಮಂದಿ ಬಲಿಯಾಗಿದ್ದಾರೆ.

ವೈಟ್ ಫಾಸ್ಪರಸ್ ಕೇವಲ ಸ್ಫೋಟಕವಲ್ಲ. ಅದೊಂದು ಅತ್ಯಂತ ಅಪಾಯಕಾರಿ ರಾಸಾಯನಿಕ ಪದಾರ್ಥ. ಮೇಣದಂತೆ ಕಾಣುವ ಈ ವಸ್ತು ಗಾಳಿಯ ಸಂಪರ್ಕಕ್ಕೆ ಬಂದ ತಕ್ಷಣ ಆಮ್ಲಜನಕದೊಂದಿಗೆ ಬೆರೆತು ಸ್ವಯಂಚಾಲಿತವಾಗಿ ಉರಿಯಲು ಪ್ರಾರಂಭಿಸುತ್ತದೆ. ಇದರ ತೀವ್ರತೆ ಎಷ್ಟಿರುತ್ತದೆ ಎಂದರೆ, ಇದು ಉರಿಯುವಾಗ ಸುಮಾರು 815 ಡಿಗ್ರಿ ಸೆಲ್ಸಿಯಸ್ ಶಾಖವನ್ನು ಹೊರಹಾಕುತ್ತದೆ. ಸಾಮಾನ್ಯ ಮಾನವ ದೇಹ 50-60 ಡಿಗ್ರಿ ಶಾಖವನ್ನೇ ತಡೆಯಲಾರದು, ಅಂತಹದರಲ್ಲಿ ಈ ತಾಪಮಾನವು ಜೀವಂತ ದಹನಕ್ಕೆ ಸಮಾನವಾಗಿದೆ.

Leave a Reply

Your email address will not be published. Required fields are marked *

error: Content is protected !!