ಉದಯವಾಹಿನಿ, ಸುಂಟೆಕ್ ಎನರ್ಜಿ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಸೌರ ಇಂಧನ ಪರಿಹಾರ ಒದಗಿಸುವ ಸಂಸ್ಥೆಯಾದ ಟೂಜೋನ್ ಸೋಲಾರ್ (TRUZON Solar), ಟೀಮ್ ಇಂಡಿಯಾದ ಐಸಿಸಿ ಪುರುಷರ T20 ವಿಶ್ವಕಪ್ 2026 ವಿಜೇತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಅದೇ ತಂಡದ ಸದಸ್ಯರಾದ ತಿಲಕ್ ವರ್ಮಾ ಅವರಿಂದ ಹೂಡಿಕೆಯನ್ನು ಪಡೆದುಕೊಂಡಿರುವುದಾಗಿ ಘೋಷಿಸಿದೆ.
ಟೂಜೋನ್ ಸೋಲಾರ್‌ನ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಚಾರುಗುಂಡ್ಲ ಭವಾನಿ ಸುರೇಶ್ ಅವರು, ಇಬ್ಬರೂ ಆಟಗಾರರು ಕಂಪನಿಯಲ್ಲಿ ಹೂಡಿಕೆ ಮಾಡಿರುವುದನ್ನು ಖಚಿತಪಡಿಸಿದ್ದಾರೆ. ಇದು ಸಂಸ್ಥೆಯ ದೀರ್ಘಕಾಲೀನ ದೃಷ್ಟಿಕೋನ ಮತ್ತು ಭಾರತದ ಇಂಧನ ಪರಿವರ್ತನೆಗೆ ಕಂಪನಿಯು ನೀಡುತ್ತಿರುವ ಕೊಡುಗೆಯ ಮೇಲಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಭವಾನಿ ಸುರೇಶ್ ‘ಟೂಜೋನ್ ಸೋಲಾರ್ ಸೌರ ಇಂಧನ ಕ್ಷೇತ್ರದಲ್ಲಿ 17 ವರ್ಷಗಳ ಯಶಸ್ವಿ ಪಯಣವನ್ನು ಪೂರೈಸಿದೆ. ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಅವರು ಹೂಡಿಕೆ ಮಾಡಲು ನಿರ್ಧರಿಸಿರುವುದು ನಾವು ಈ ಕ್ಷೇತ್ರದಲ್ಲಿ ಗಳಿಸಿರುವ ವಿಶ್ವಾಸಾರ್ಹತೆಗೆ ಸಾಕ್ಷಿಯಾಗಿದೆ’ ಎಂದರು.
