ಉದಯವಾಹಿನಿ, ಶ್ರೀಹರಿಕೋಟಾ: ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಿಂಗಾಪುರದ ಏಳು ಉಪಗ್ರಹಗಳನ್ನು ಪಿಎಸ್ಎಲ್ವಿ ರಾಕೆಟ್ ಮೂಲಕ ನಭಕ್ಕೆ ಇಂದು ಬೆಳಿಗ್ಗೆ 6.31ಕ್ಕೆ ಯಶಸ್ವಿಯಾಗಿ ಉಡಾಯಿಸಲಾಗಿದ್ದು ಅವುಗಳನ್ನು ಉದ್ದೇಶಿತ ಕಕ್ಷೆಗೆ ಸೇರಿಸಲಾಗಿದೆ ಎಂದು ಇಸ್ರೋ ಹೇಳಿದೆ.
ಉಡಾವಣೆಗೊಂಡ 23 ನಿಮಿಷಗಳ ನಂತರ ಪ್ರಾಥಮಿಕ ಉಪಗ್ರಹವು ಬೇರ್ಪಟ್ಟಿದೆ. ಮತ್ತು ನಂತರ ಆರು ಇತರ ಉಪಗ್ರಹಗಳು ಅನುಕ್ರಮವಾಗಿ ಉದ್ದೇಶಿತ ಕಕ್ಷೆಗಳಿಗೆ ನಿಯೋಜಿಸಲ್ಪಟ್ಟವು ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.ಈ ತಿಂಗಳ ಆರಂಭದಲ್ಲಿ ಬಹು ನಿರೀಕ್ಷಿತ ಚಂದ್ರಯಾನ-3 ಉಡಾವಣೆಯ ನಂತರ ವಾಣಿಜ್ಯ ಅಂಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಈ ಯೋಜನೆ ಕೈಗೊಳ್ಳುತ್ತಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದರು.
ಮಿಷನ್ ಕಂಟ್ರೋಲ್ ಸೆಂಟರ್ನಲ್ಲಿ ಮಾತನಾಡಿದ ಅವರು ಸಿಂಗಾಪುರದಿಂದ ಬಾಹ್ಯಾಕಾಶ ಉಪಗ್ರಹಗಳು ಉಡಾಯಿಸುವ ಮಿಷನ್ಗೆ ನಮ್ಮ ಪಿಎಸ್ಎಲ್ವಿ ಮೇಲೆ ನಂಬಿಕೆ ಇಡಲಾಗಿತ್ತು ಅದಕ್ಕೆ ನಾವು ಸಿಂಗಪುರ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಬೆಳಿಗ್ಗೆ ಈ ಕಾರ್ಯಾಚರಣೆಯನ್ನು ವೀಕ್ಷಿಸಿದ್ದಕ್ಕಾಗಿ ಮತ್ತು ನಮ್ಮನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ಅಭಿನಂದಿಸುವುದಕ್ಕಾಗಿ ನಾನು ನಿಮ್ಮೆಲ್ಲರಿಗೂ ಧನ್ಯವಾದಗಳು. ನಾವು ಮತ್ತು ನಿಮಗೆ ನಿರ್ದಿಷ್ಟವಾಗಿ ಹೇಳಲು ಬಯಸುವುದೇನೆಂದರೆ ನಾವು ಶೀಘ್ರದಲ್ಲೇ ಮತ್ತೊಂದು ಪಿಎಸ್ಎಲ್ವಿ ಮಿಷನ್ನೊಂದಿಗೆ ಆಗಸ್ಟ್ನಲ್ಲಿ ಅಥವಾ ಸೆಪ್ಟೆಂಬರ್ ಆರಂಭವಾಗಲಿದೆ ಮತ್ತೊಮ್ಮೆ ನಾವು ಇಲ್ಲಿಗೆ ಹಿಂತಿರುಗಲಿದ್ದೇವೆ ಎಂದು ಅವರು ಹೇಳಿದರು.
ನಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ, ಪಕ್ಷದ ಕಾರ್ಯಕರ್ತ : ಸಿ.ಟಿ.ರವಿ ಇಂತಹ ಅದ್ಭುತ ಮತ್ತು ನಿಖರವಾದ ಮಿಷನ್ ಅನ್ನು ನಮಗೆ ನೀಡಿದಕ್ಕಾಗಿ ಇಸ್ರೋ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳುಎಂದು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಿ ರಾಧಾಕೃಷ್ಣನ್ ಹೇಳಿದರು, ಇಂದಿನ ಕಾರ್ಯಾಚರಣೆಯಲ್ಲಿ ನಾವು ನೋಡಿದ್ದಕ್ಕಿಂತ ಉತ್ತಮವಾದದ್ದನ್ನು ಕೇಳಿದ್ದೇವೆ ಎಂದು ಹೇಳಿದರು.
