ಉದಯವಾಹಿನಿ, ಜಮ್ಮು: ದೇವರೆ ನನ್ನ ಜೀವನವನ್ನು ಕಾಪಾಡಿದ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ಧುಲ್ಲಾ ತಿಳಿಸಿದರು. ಮದುವೆ ಸಮಾರಂಭದಲ್ಲಿ ತಮ್ಮ ಮೇಲಿನ ಹತ್ಯೆ ಯತ್ನದ ಬಳಿಕ ಮೊದಲ ಬಾರಿ ಪ್ರತಿಕ್ರಿಯಿಸಿ ಮಾತನಾಡಿರುವ ಅವರು, ಈ ಘಟನೆಯಲ್ಲಿ ಯಾವುದೇ ಭದ್ರತಾ ಲೋಪಗಳು ಸಂಭವಿಸಿಲ್ಲ ಎಂದರು.
ಜಮ್ಮುವಿನ ಗ್ರೇಟರ್ ಕೈಲಾಶ್ ಪ್ರದೇಶದ ರಾಯಲ್ ಪಾರ್ಕ್ ಬ್ಯಾಂಕ್ವೆಟ್ ಹಾಲ್ನಲ್ಲಿ ಎನ್‌ಸಿ ನಾಯಕರೊಬ್ಬರ ಮಗಳ ವಿವಾಹ ಸಮಾರಂಭಕ್ಕಾಗಿ ಹೋಗಿದಾಗ ಈ ಹತ್ಯೆ ಯತ್ನ ನಡೆದಿದೆ. ಈ ವೇಳೆ, ಉಪಮುಖ್ಯಮಂತ್ರಿ ಸುರಿಂದರ್ ಚೌಧರಿ ಮತ್ತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಸಲಹೆಗಾರ ನಾಸಿರ್ ಸೊಗಾಮಿ ಕೂಡ ಉಪಸ್ಥಿತರಿದ್ದರು. ಘಟನೆಯಲ್ಲಿ ಅಬ್ದುಲ್ಲಾ ಅವರು ಭಾರಿ ಪ್ರಮಾದದಿಂದ ಪಾರಾಗಿದ್ದು, ಡಿಸಿಎಂ ಚೌಧರಿ ಗಾಯಗೊಂಡಿದ್ದರು.
ಈ ಘಟನೆ ಕುರಿತು ಇಂದು ಮಾತನಾಡಿದ ಅವರು, ದೇವರೇ ನನ್ನ ರಕ್ಷಣೆ ಮಾಡಿದ್ದು, ನಾನು ಸುರಕ್ಷಿತವಾಗಿದ್ದೇನೆ ಎಂದರು. ಹತ್ಯೆಗೆ ಯತ್ನ ಮಾಡಿದ ದಾಳಿಕೋರ ನನ್ನ ಹಿಂಬದಿಯ ಬಲಭಾಗದಲ್ಲಿರುವುದುನ್ನು ಸಿಸಿಟಿವಿಯಕಲ್ಲಿ ನೋಡಿದೆ. ಕಡೆ ಕ್ಷಣದಲ್ಲಿ ಎನ್ಎಸ್ಜಿ ಸೇರಿದಂತೆ ಭದ್ರತಾ ಸಿಬ್ಬಂದಿ, ತಮ್ಮನ್ನು ರಕ್ಷಿಸಿ ತಕ್ಷಣಕ್ಕೆ ನಾನು ನನ್ನ ಕಾರು ಹತ್ತಿ ಸುರಕ್ಷಿತ ಪ್ರಯಾಣ ಮಾಡುವಂತೆ ನೋಡಿಕೊಂಡರು ಎಂದರು.
ತಾವು ಸ್ಥಳದಿಂದ ಹೊರಡುವಾಗ ದೊಡ್ಡ ಶಬ್ದ ಕೇಳಿತು. ಅದನ್ನು ನಾನು ಪಟಾಕಿ ಶಬ್ಧ ಎಂದು ಭಾವಿಸಿದೆ. ಬಳಿಕ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಲು ಮುಂದಾಗಿದ್ದು, ಎರಡು ಬಾರಿ ಗುಂಡು ಹಾರಿಸಿದ್ದ. ಆದರೆ, ಭದ್ರತಾ ಸಿಬ್ಬಂದಿ ಮಧ್ಯಪ್ರವೇಶದಿಂದಾಗಿ ಆ ಗುಂಡು ಗುರಿ ತಪ್ಪಿದ್ದು, ನನಗೆ ಯಾವುದೇ ತೊಂದರೆ ಆಗಿಲ್ಲ. ಈ ಹತ್ಯೆಯ ಯತ್ನದ ಹಿಂದೆ ದಾಳಿಕೋರ ಯಾವ ಉದ್ದೇಶ ಹೊಂದಿದ್ದ ಎಂಬುದು ನನಗೆ ತಿಳಿದಿಲ್ಲ ಎಂದಿದ್ದಾರೆ.
ಭದ್ರತಾ ಲೋಪದ ಪ್ರಶ್ನೆ: ಅಬ್ದುಲ್ಲಾ ಅವರ ಹತ್ಯೆ ಯತ್ನದಲ್ಲಿ ಭದ್ರತಾ ಲೋಪದ ಪ್ರಶ್ನೆ ಎದ್ದಿದೆ. ಝೆಡ್+ ಭದ್ರತೆ ಇದ್ದರೂ ಈ ದಾಳಿ ನಡೆದಿರುವುದು ಹಲವು ಪ್ರಶ್ನೆ ಹುಟ್ಟು ಹಾಕಿದೆ. ಪ್ರಮಾಣಿತ ಶಿಷ್ಟಾಚಾರದ ಪ್ರಕಾರ, ಉನ್ನತ ವ್ಯಕ್ತಿಗಳು ಭೇಟಿ ನೀಡುವ ಪ್ರದೇಶವನ್ನು ಸ್ವಚ್ಛಗೊಳಿಸುವ ಜೊತೆಗೆ ಕಟ್ಟುನಿಟ್ಟಾದ ಪ್ರವೇಶ ನಿಯಂತ್ರಣವನ್ನು ಜಾರಿಗೊಳಿಸಬೇಕು.
ಭದ್ರತಾ ಲೋಪದ ಕುರಿತು ಎದ್ದಿರುವ ಪ್ರಶ್ನೆಯನ್ನು ತಳ್ಳಿ ಹಾಕಿರುವ ಫರೂಕ್ ಅಬ್ಧುಲ್ಲಾ, ತಮ್ಮ ಮಗ ಮತ್ತು ಜಮ್ಮು ಮತ್ತು ಕಾಶ್ಮೀರ ಸಿಎಂ ಆಗಿರುವ ಓಮರ್ ಅಬ್ಧುಲ್ಲಾ ಕೂಡ ಈ ಘಟನೆ ಕುರಿತು ಕಾಳಜಿ ವ್ಯಕ್ತಪಡಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಿಎಂ, ಲೋಡ್ ಮಾಡಲಾದ ಪಿಸ್ತೂಲ್ ಹೊಂದಿರುವ ವ್ಯಕ್ತಿ ಪಾಯಿಂಟ್-ಬ್ಲಾಂಕ್ ರೇಂಜ್ ಒಳಗೆ ಹೋಗಿ ಗುಂಡು ಹಾರಿಸಲು ಪ್ರಯತ್ನ ಮಾಡಿದ್ದಾರೆ. ರಕ್ಷಣಾ ಸಿಬ್ಬಂದಿಯ ಈ ಪ್ರಯತ್ನ ವಿಫಲವಾಗುವಂತೆ ನೋಡಿಕೊಂಡರು. ಝೆಡ್+ ಎನ್ಎಸ್ಜಿ ಭದ್ರತೆ ಹೊಂದಿರುವ ಮಾಜಿ ಸಿಎಂ ಬಳಿ ಯಾರಾದರೂ ಹೋಗಲು ಹೇಗೆ ಸಾಧ್ಯವಾಯಿತು. ಇದು ಹೆಚ್ಚಿನ ಪ್ರಶ್ನೆ ಹುಟ್ಟು ಹಾಕಿದೆ.
