ಉದಯವಾಹಿನಿ, 2025ರ ಮಹಾಕುಂಭ ಮೇಳದ ಸಂದರ್ಭದಲ್ಲಿ ಆಕರ್ಷಕ ನೋಟದ ಮೂಲಕ ಮಣಿ ಮಾರಾಟ ಮಾಡುತ್ತಿದ್ದ, ಮೊನಾಲಿಸಾ ಎಂಬ ಯುವತಿ ಸಾಮಾಜಿಕ ಮಾಧ್ಯಮಗಳಲ್ಲಿ ಏಕಾಏಕಿ ಪ್ರಸಿದ್ಧಿ ಪಡೆದುಕೊಂಡಿದ್ದಳು. ಅದಾದ ಬಳಿಕ ಆಕೆಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಕೂಡ ಒಲಿದು ಬಂದಿತ್ತು.
ಮೊನಾಲಿಸಾ ಕುಟುಂಬಸ್ಥರ ವಿರೋಧದ ನಡುವೆಯೂ ತನ್ನ ಗೆಳಯ ಫರ್ಮಾನ್ ಖಾನ್ ಎಂಬುವವರ ಜೊತೆ ನಿನ್ನೆ (ಮಾರ್ಚ್ 11) ವಿವಾಹವಾಗಿದ್ದಾರೆ. ಸದ್ಯ, ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಮದುವೆಯ ಫೋಟೋಗಳು ಮತ್ತು ವೀಡಿಯೊಗಳು ಹರಿದಾಡುತ್ತಿವೆ.
ಈ ಕುರಿತು, ಅದೇ ಮಹಾಕುಂಭದ ಸಂದರ್ಭದಲ್ಲಿ ಪ್ರಸಿದ್ದಿ ಪಡೆದುಕೊಂಡಿರುವ ಗ್ಲಾಮರ್ ಲೋಕದಿಂದ ಸನ್ಯಾಸ ದೀಕ್ಷೆ ಪಡೆದುಕೊಂಡಿರುವ ಹರ್ಷ ರಿಚಾರಿಯಾ ಎಂಬುವವರು ಮೊನಾಲಿಸಾ ಮದುವೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. “ನಾನಿದನ್ನು ಕೇರಳ ಸ್ಟೋರಿ-2 ಪ್ರಚಾರ ಎಂದುಕೊಂಡಿದ್ದೆ. ಆದರೆ, ಇದು ಕೇರಳ ಸ್ಟೋರಿ-3. ಮೊನಾಲಿಸಾ ಅವರ ಭವಿಷ್ಯ ಹೇಗಿರಲಿದೆ ಎಂದು ಹೇಳುವ ಅಗತ್ಯವಿಲ್ಲ’ ಎಂದಿದ್ದಾರೆ.
‘ಆರಂಭದಲ್ಲಿ ಎಲ್ಲರೂ ಇದನ್ನು ಕೇರಳ ಸ್ಟೋರಿ-2ರ ಪ್ರಚಾರ ಎಂದು ಭಾವಿಸಿದ್ದರು. ಈಗ ಮೊನಾಲಿಸಾ ನಟಿಸಿರುವುದು ಕೇರಳ ಸ್ಟೋರಿ-3. ಮಹಾ ಕುಂಭಮೇಳದಲ್ಲಿ ಮಣಿಮಾಲೆಗಳನ್ನು ಮಾರುತ್ತ ಖ್ಯಾತಿ ಪಡೆದ ಸಾಮಾನ್ಯ ಕುಟುಂಬದ ಹುಡುಗಿಯು ತನ್ನ ಸುಂದರವಾದ ಕಣ್ಣುಗಳಿಂದಾಗಿಯೇ ಚಲನಚಿತ್ರದಲ್ಲಿ ನಟಿಸಲು ಅವಕಾಶಗಳು ಒದಗಿಬಂದವು’ ಎಂದಿದ್ದಾರೆ.
