ಉದಯವಾಹಿನಿ, ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ನಟ ರಜನಿಕಾಂತ್ ಅವರು ತಮ್ಮ ಬಹುಕಾಲದ ಗೆಳೆಯ ಹಾಗೂ ಕನ್ನಡದ ಹಿರಿಯ ಸಿನಿಮಾ ವರದಿಗಾರ ಕೆ.ಜೆ. ಕುಮಾರ್ ಅವರ ಸಾವಿನ ಕುರಿತು ಕನ್ನಡದಲ್ಲಿಯೇ ಸಂತಾಪ ಸೂಚಿಸಿದ್ದಾರೆ.ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಕೆಲಸ ಮಾಡಿರುವ ಕೆ.ಜೆ. ಕುಮಾರ್ ಅವರು ಪತ್ರಿಕಾ ರಂಗದಲ್ಲಿ ಸಾಕಷ್ಟು ಮನ್ನಣೆ ಪಡೆದುಕೊಂಡಿದ್ದರು. ಕನ್ನಡದ ಖ್ಯಾತ ಸಿನಿ ಪತ್ರಕರ್ತರಲ್ಲಿ ಒಬ್ಬರಾಗಿದ್ದ ಅವರು, ನಿನ್ನೆ (ಮಾರ್ಚ್ 11) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ರಜನಿ ಹಾಗೂ ಕೆ.ಜೆ ಕುಮಾರ್ ಬಹಳ ಕಾಲದಿಂದಲೂ ಆತ್ಮೀಯ ಗೆಳೆಯರಾಗಿದ್ದರು. ಸ್ನೇಹಿತನ ಸಾವಿನ ಕುರಿತು ರಜನಿಕಾಂತ್ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಕನ್ನಡದಲ್ಲೇ ಭಾವುಕ ನುಡಿಗಳಿರುವ ಪೋಸ್ಟ್ ಹಂಚಿಕೊಂಡಿದ್ದಾರೆ.
‘ದಿವಂಗತ ಕೆ.ಜೆ. ಕುಮಾರ್‌ರವರು ನನ್ನ ಆತ್ಮೀಯ ಸ್ನೇಹಿತರು. ಆರಂಭ ಕಾಲದಿಂದಲೂ ನನ್ನ ನಟನೆಯನ್ನು ಮೆಚ್ಚಿ ಪ್ರೋತ್ಸಾಹಿಸಿದವರು. ಬಹಳ ಸರಳವಾಗಿ ಯಾವಾಗಲೂ ಹಸನ್ಮುಖಿಯಾಗಿ ಎಲ್ಲರ ಜೊತೆಯಲ್ಲಿದ್ದರು. ಅವರ ಅಗಲಿಕೆ ನನ್ನ ಮನಸ್ಸಿಗೆ ತುಂಬಾ ನೋವು ಉಂಟುಮಾಡಿದೆ. ಅವರ ಕುಟುಂಬಸ್ಥರಿಗೆ ನನ್ನ ಸಂತಾಪಗಳು,’ ಎಂದು ಬರೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!