ಉದಯವಾಹಿನಿ, ಸೋನಿಪತ್​ (ಹರಿಯಾಣ): ವ್ಯಕ್ತಿಯೊಬ್ಬನ ವಿಭಿನ್ನ ಆಲೋಚನೆ, ಆಸಕ್ತಿಗಳು ಆತನಲ್ಲಿರುವ ಕ್ರಿಯಾತ್ಮಕತೆಯನ್ನು ಹೊರತರಲು ಸಾಧ್ಯ ಎಂಬುದನ್ನು ತೋರಿಸಿದ್ದಾರೆ ಸೋನಿಪತ್‌ನ ಶಹಪುರ್ ಟರ್ಕ್ ಗ್ರಾಮದ ನಿವಾಸಿ ರಾಕಿ ಶಹಪುರಿಯಾ ಅಲಿಯಾಸ್​ ರಾಕಿ ಕಟಾರಿಯಾ,
ರಾಕಿ ತಮ್ಮ ಟ್ರ್ಯಾಕ್ಟರ್​ ಅನ್ನು ಮೊಬೈಲ್​ ಮನೆಯಾಗಿ ಪರಿವರ್ತಿಸಿದ್ದು, ಇದರ ಮೂಲಕವೇ ಸಂಚಾರವನ್ನು ಆರಂಭಿಸಿದ್ದಾರೆ. ಇದೇ ಮೊಬೈಲ್​ ಟ್ರ್ಯಾಕ್ಟರ್​ನಲ್ಲಿ ಕಾಲ ಕಳೆಯುತ್ತಾ ಸಂಚಾರ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಭಾವನ ಸಲಹೆಯಂತೆ ಮಾರ್ಪಾಡು: ರಾಕಿಗೆ ಪ್ರವಾಸ ಎಂದರೆ ತುಂಬಾ ಅಚ್ಚು-ಮೆಚ್ಚು. ಆದರೆ, ಅವರು ಕುಟುಂಬ ಆರ್ಥಿಕವಾಗಿ ಸ್ಥಿತಿವಂತರಲ್ಲ. ಇದು ಈತನ ಕನಸಿಗೆ ಅಡ್ಡಿಯಾಗಲಿಲ್ಲ. ಈತನ ಪ್ರವಾಸ ಪ್ರೇಮಕಂಡ ಸಹೋದರಿಯ ಪತಿ ಹರಿಯಾಣದ ಸಂಕೇತವಾಗಿರು ಟ್ರ್ಯಾಕ್ಟರ್​ನಲ್ಲಿಯೇ ಸಂಚಾರ ಮಾಡುವಂತೆ ಸಲಹೆ ನೀಡಿದರಂತೆ. ಟ್ರ್ಯಾಕ್ಟರ್​ಗಳು ಬಲವಾಗಿದ್ದು, ಎಂತಹ ರಸ್ತೆಯಲ್ಲೂ ಸಂಚರಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಅದರಲ್ಲಿಯೇ ಸಂಚಾರ ಕೈಗೊಳ್ಳುವಂತೆ ಸಲಹೆ ನೀಡಿದರು. ಅದರಂತೆ ರಾಕಿ ತಮ್ಮ ಟ್ರ್ಯಾಕ್ಟರ್​ ಅನ್ನು ಮೊಬೈಲ್​ ಮನೆಯಾಗಿ ಪರಿವರ್ತಿಸಿದ್ದಾರೆ.
ಈ ಟ್ರ್ಯಾಕ್ಟರ್​ನಲ್ಲಿದೆ ಬೆಡ್​, ಅಡುಗೆ ಕೋಣೆ, ಕ್ಯಾಬಿನ್​: ರಾಕಿ 10 ಲಕ್ಷ ನೀಡಿ ಟ್ರ್ಯಾಕ್ಟರ್​ ಖರೀದಿಸಿ, ಅದಕ್ಕೆ 4 ಲಕ್ಷ ಖರ್ಚು ಮಾಡಿ ವಿಶೇಷ ಕ್ಯಾಬಿನ್​ ನಿರ್ಮಾಣ ಮಾಡಿಕೊಂಡಿದ್ದಾರೆ. ಟ್ರ್ಯಾಕ್ಟರ್​ 4/4 ವ್ಯವಸ್ಥೆಯಂತೆ ಮಾರ್ಪಾಡು ಮಾಡಿದ್ದಾರೆ. ಇದರಿಂದಾಗಿ ಸಂಚಾರದಲ್ಲೂ ಅನುಕೂಲವಾಗಿದೆ. ಟ್ರ್ಯಾಕ್ಟರ್​ ಕ್ಯಾಬಿನ್​ ಮೇಲೆ ಆರಾಮವಾಗಿ ಮಲಗುವ, ಕೂರುವ ವ್ಯವಸ್ಥೆ ಮಾಡಿದ್ದಾರೆ. ಜೊತೆಗೆ ಅಗತ್ಯವಿದ್ದಲ್ಲಿ ಅಡುಗೆ ಮಾಡಿಕೊಳ್ಳಲು ಒಂದು ಸಣ್ಣ ಅಡುಗೆ ಕೋಣೆಯ ವ್ಯವಸ್ಥೆಯನ್ನು ಮಾಡಿದ್ದು, ಇದರಲ್ಲಿ ಆರಾಮವಾಗಿ 8 ಜನರು ಕುಳಿತು. ಇಬ್ಬರು ಮಲಗಿ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!