ಉದಯವಾಹಿನಿ, ಸನ್‌ ರೈಸರ್ಸ್‌ ಲೀಡ್ಸ್‌ ತಂಡದ ಮಾಲಕಿ ಕಾವ್ಯ ಮಾರನ್‌ ಅವರು ಹಂಡ್ರೆಡ್‌ ಹರಾಜಿನಲ್ಲಿ) ಪಾಕಿಸ್ತಾನದ ಸ್ಪಿನ್ನರ್‌ ಅಬ್ರಾರ್ ಅಹ್ಮದ್ ಖರೀದಿಸಿದ್ದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಹರಾಜು ಪ್ರಕ್ರಿಯೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಒಡೆತನದ ಸನ್‌ರೈಸರ್ಸ್ ಲೀಡ್ಸ್ 27 ವರ್ಷದ ಲೆಗ್-ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು 1,90,000 ಪೌಂಡ್‌(2.34 ಕೋಟಿ ರೂ.) ನೀಡಿ ಖರೀದಿಸಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹಾಳಾಗಿರುವ ಕಾರಣ ಐಪಿಎಲ್‌ ಫ್ರಾಂಚೈಸಿಗಳು ಪಾಕಿಸ್ತಾನಿ ಕ್ರಿಕೆಟಿಗರನ್ನು ಖರೀದಿಸುವುದಿಲ್ಲ ಎಂಬ ಸುದ್ದಿ ಪ್ರಕಟವಾಗಿತ್ತು. ಆದರೆ ಅಚ್ಚರಿ ಎಂಬಂತೆ ಸನ್‌ರೈಸರ್ಸ್ ಲೀಡ್ಸ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿದೆ. 2009 ರಿಂದ ಪಾಕಿಸ್ತಾನದ ಆಟಗಾರರು ಐಪಿಎಲ್‌ನಲ್ಲಿ ಆಡುತ್ತಿಲ್ಲ. ಎರಡೂ ರಾಷ್ಟ್ರಗಳು ಐಸಿಸಿ ಮತ್ತು ಏಷ್ಯಾಕಪ್‌ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಆಯೋಜಿಸುವ ಒಂದು ವಿಶಿಷ್ಟವಾದ 100 ಎಸೆತಗಳ ಕ್ರಿಕೆಟ್ ಟೂರ್ನಮೆಂಟ್ ಇದಾಗಿದ್ದು ಸಾಂಪ್ರದಾಯಿಕ ಟಿ20 ಕ್ರಿಕೆಟ್‌ಗಿಂತ ವಿಭಿನ್ನವಾಗಿ ಇರುತ್ತದೆ.
ಪ್ರತಿ ಇನ್ನಿಂಗ್ಸ್‌ನಲ್ಲಿ ಕೇವಲ 100 ಎಸೆತಗಳು ಇರುತ್ತವೆ. ಅತಿ ಕಡಿಮೆ ಸಮಯದಲ್ಲಿ (ಸುಮಾರು 2.5 ಗಂಟೆ) ಪಂದ್ಯ ಮುಕ್ತಾಯವಾಗುತ್ತದೆ. 6 ಎಸೆತದ ಬದಲಾಗಿ ಪ್ರತಿ 10 ಎಸೆತಗಳ ನಂತರ ಬೌಲಿಂಗ್ ಎಂಡ್ ಬದಲಾಗುತ್ತದೆ. ಒಬ್ಬ ಬೌಲರ್ ಸತತವಾಗಿ 5 ಅಥವಾ 10 ಎಸೆತಗಳನ್ನು ಎಸೆಯಬಹುದು. ಒಬ್ಬ ಬೌಲರ್ ಪಂದ್ಯವೊಂದರಲ್ಲಿ ಗರಿಷ್ಠ 20 ಎಸೆತಗಳನ್ನು ಮಾತ್ರ ಎಸೆಯಲು ಅವಕಾಶವಿದೆ.
ಇನ್ನಿಂಗ್ಸ್‌ನ ಮೊದಲ 25 ಎಸೆತಗಳು ಪವರ್‌ಪ್ಲೇ ಇರುತ್ತದೆ. ಒಟ್ಟು 8 ತಂಡಗಳು ಇರಲಿದ್ದು ಈ ಬಾರಿ ಜುಲೈ 21 ರಿಂದ ಆಗಸ್ಟ್ 16 ರವರೆಗೆ ಟೂರ್ನಿ ನಡೆಯಲಿದೆ.

 

Leave a Reply

Your email address will not be published. Required fields are marked *

error: Content is protected !!