ಉದಯವಾಹಿನಿ, ನವದೆಹಲಿ: ಭಾರತೀಯ ನೌಕಾ ಪಡೆಯ ಬೆಂಗಾವಲಿನೊಂದಿಗೆ 40,000 ಮೆಟ್ರಿಕ್ ಟನ್‌ಗಳಿಗೂ ಹೆಚ್ಚು ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು ಹೊತ್ತ ಭಾರತೀಯ ಶಿವಾಲಿಕ್ ಹಡಗು ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿದೆ. ಇರಾನ್ ಬಂದ್ ಮಾಡಿರುವ ಹಾರ್ಮುಜ್ ಜಲಸಂಧಿಯಲ್ಲಿ ನೌಕಾಪಡೆಯ ಬೆಂಗಾವಲಿನಲ್ಲಿ ಶಿವಾಲಿಕ್ ಸಂಚರಿಸಿ ನಂತರ ಮುಕ್ತ ಸಮುದ್ರಕ್ಕೆ ಯಶಸ್ವಿಯಾಗಿ ಸಾಗಿದೆ ಎಂದು ವರದಿಯಾಗಿದೆ. ಈ ಹಡಗು ಎರಡು ದಿನಗಳ ಒಳಗಡೆ ಮುಂಬೈ ಅಥವಾ ಕಾಂಡ್ಲಾ ಬಂದರಿನಲ್ಲಿ ಡಾಕಿಂಗ್ ಆಗುವ ಸಾಧ್ಯತೆಯಿದೆ.
ಮತ್ತೊಂದು ಎಲ್‌ಪಿಜಿ ಹೊತ್ತ ಹಡಗು ನಂದಾದೇವಿಯೂ ನೌಕಾಪಡೆಯ ಬೆಂಗಾವಲಿನಲ್ಲಿ ಇಂದು ಬೆಳಗ್ಗೆ ಜಲಸಂಧಿಯಯನ್ನು ದಾಟಿದ್ದು ಎರಡು ದಿನದ ಒಳಗಡೆ ಭಾರತದ ಬಂದರು ತಲುಪುವ ಸಾಧ್ಯತೆಯಿದೆ.
