ಉದಯವಾಹಿನಿ, ಬಾಲಿವುಡ್ ನಟ ಸಂಜಯ್ ದತ್ ಭಾರತೀಯ ಸಿನಿರಂಗದಲ್ಲಿ ಹಲವು ದಶಕಗಳಿಂದ ತಮ್ಮದೇ ಆದ ಪ್ರಭಾವವನ್ನು ಉಳಿಸಿಕೊಂಡಿರುವ ಪ್ರಮುಖ ನಟರಲ್ಲಿ ಒಬ್ಬರು. ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಇತ್ತೀಚೆಗೆ ದುಬೈನಲ್ಲಿ ನಡೆದ ಒಂದು ಘಟನೆ ಮತ್ತೆ
ಸಂಜಯ್ ದತ್
ಅವರ ಜನಪ್ರಿಯತೆಯನ್ನು ಸಾಬೀತುಪಡಿಸಿದೆ. ಅಭಿಮಾನಿಯೊಬ್ಬರು ಅವರಿಗೆ ಅತ್ಯಂತ ದುಬಾರಿ ಹಾಗೂ ವಿಶೇಷ ಉಡುಗೊರೆಯನ್ನು ನೀಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ದುಬೈನಲ್ಲಿ ಅಭಿಮಾನಿಯಿಂದ ವಿಶೇಷ ಉಡುಗೊರೆ
ಪಾಕಿಸ್ತಾನ ಮೂಲದ ಅಭಿಮಾನಿ ಕಾಶಿಫ್ ಜಮೀರ್ ಎಂಬ ವ್ಯಕ್ತಿ ಸಂಜಯ್ ದತ್ ಅವರಿಗೆ ಕಸ್ಟಮ್ ಚಿನ್ನದ ಲೇಪಿತ ಐಫೋನ್ 17 ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಭೇಟಿಯ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿವೆ. ಈ ಕ್ಷಣವನ್ನು ಕಂಡ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
