ಉದಯವಾಹಿನಿ, ಬೇಸಿಗೆಕಾಲ ಶುರುವಾಗಿದೆ. ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಎಳನೀರು, ಮಜ್ಜಿಗೆ, ಜ್ಯೂಸ್‌ಗಳು, ಶರಬತ್ತು, ರೋಸ್ ಮಿಲ್ಕ್ ಮುಂತಾದ ವೈವಿಧ್ಯಮಯ ಪಾನೀಯಗಳ ಮಾರಾಟ ಮಾಡಲಾಗುತ್ತಿದೆ. ಈ ಸೀಸನ್ನಲ್ಲಿ ನೀವು ಎಸಿಯಲ್ಲಿ ಕೆಲಸ ಮಾಡುತ್ತಿರಲಿ ಅಥವಾ ಬಿಸಿಲಿನಲ್ಲಿ ಕೆಲಸ ಮಾಡುತ್ತಿರಲಿ, ನಿರ್ಜಲೀಕರಣವನ್ನು ತಪ್ಪಿಸಲು ಕೆಲವು ತಂಪಾದ ಪಾನೀಯಗಳನ್ನು ಕುಡಿಯುವುದು ತುಂಬಾ ಮುಖ್ಯ.
ಅದರಲ್ಲೂ ಹೆಚ್ಚು ಸಕ್ಕರೆ ಬೆರೆಸದೇ ಇರುವುದು ಪಾನೀಯಗಳನ್ನು ಆಯ್ಕೆ ಮಾಡುವುದು ಮುಖ್ಯ. ಅದರಲ್ಲಿಯೂ ಎಳನೀರು ಮತ್ತು ಮಜ್ಜಿಗೆ ಆಯ್ಕೆಗಳಾಗಿವೆ. ಎಳನೀರು ಮತ್ತು ಮಜ್ಜಿಗೆ ಈ ಎರಡು ಪಾನೀಯಗಳು ವಿಭಿನ್ನ ಪೋಷಕಾಂಶಗಳನ್ನು ಹೊಂದಿರುವುದರಿಂದ, ಇವೆರಡರ ಪ್ರಯೋಜನಗಳು ಸಹ ಕೊಂಚ ವಿಭಿನ್ನವಾಗಿರುತ್ತದೆ. ಹಾಗಾದ್ರೆ ಈ ಎರಡರಲ್ಲಿ ಯಾವುದು ಉತ್ತಮ ಆಯ್ಕೆ ಎಂದು ನೋಡೋಣ ಬನ್ನಿ.
ಎಳನೀರಿನಲ್ಲಿ ಕ್ಯಾಲೋರಿಗಳು ಕಡಿಮೆ. ಇದರಲ್ಲಿ ಎಲೆಕ್ಟ್ರೋಲೈಟ್‌ಗಳು ಸಮೃದ್ಧವಾಗಿವೆ. ವಿಶೇಷವಾಗಿ ಇದರಲ್ಲಿ ಪೊಟ್ಯಾಸಿಯಮ್ ಅಧಿಕವಾಗಿರುತ್ತದೆ. ಇದು ದೇಹವನ್ನು ಹೈಡ್ರೇಟ್ ಆಗಿರಿಸಲು ಸಹಾಯ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಕುಡಿಯುವುದರಿಂದ ಇನ್ನೂ ಹೆಚ್ಚು ಪ್ರಯೋಜನಗಳನ್ನು ಪಡರಯಬಹುದು. ಇನ್ನೂ ಮಜ್ಜಿಗೆ ಪ್ರೋಬಯಾಟಿಕ್ ಗುಣಗಳನ್ನು ಹೊಂದಿದೆ. ಇದು ದೇಹಕ್ಕೆ ತಂಪಾಗಿಸುವ ಪರಿಣಾಮವನ್ನು ಹೊಂದಿದೆ. ಇದರಲ್ಲಿರುವ ಲ್ಯಾಕ್ಟಿಕ್ ಆಮ್ಲವು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಇದರಲ್ಲಿ ಕ್ಯಾಲೋರಿಗಳು ಕಡಿಮೆ ಇರುವುದರಿಂದ ಸಕ್ಕರೆ ಸೇರಿಸದೆಯೇ ಹಾಗೆಯೇ ಕುಡಿಯಬಹುದು. ಇದು ರುಚಿಕರವಾಗಿರುವುದರಿಂದ, ಯಾವುದೇ ಸಿಹಿಕಾರಕವನ್ನು ಸೇರಿಸದೆಯೇ ಕುಡಿಯಬಹುದು. 100 ಮಿಲಿ ಎಳನೀರಿನಲ್ಲಿರುವ ಪೋಷಕಾಂಶಗಳು: 250 ಮಿಗ್ರಾಂ ಪೊಟ್ಯಾಸಿಯಮ್ ಬೇಸಿಗೆಯಲ್ಲಿ ನಿರ್ಜಲೀಕರಣವನ್ನು ತಡೆಯುತ್ತದೆ. 105 ಮಿಗ್ರಾಂ ಸೋಡಿಯಂ ದೇಹವನ್ನು ಹೈಡ್ರೇಟ್ ಮಾಡುತ್ತದೆ. ಕೇವಲ 19 ಕೆ.ಸಿ.ಎಲ್, ಕ್ಯಾಲೋರಿಗಳಲ್ಲಿ ಬಹಳ ಕಡಿಮೆ. 4.5 ಗ್ರಾಂ ಕಾರ್ಬೋಹೈಡ್ರೇಟ್‌ಗಳು, ಗ್ಲೂಕೋಸ್, ಫ್ರಕ್ಟೋಸ್ ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸುತ್ತದೆ. 100 ಮಿಲಿ ನೀರಿನಂಶದ ಮಜ್ಜಿಗೆಯಲ್ಲಿರುವ ಪೋಷಕಾಂಶಗಳು: 150 ಮಿಗ್ರಾಂ ಪೊಟ್ಯಾಸಿಯಮ್, 3 ಗ್ರಾಂ ಪ್ರೋಟೀನ್, 40 ಕೆ.ಕೆ.ಎಲ್ ಶಕ್ತಿ, 120 ಮಿಗ್ರಾಂ ಕ್ಯಾಲ್ಸಿಯಂ, 4.8 ಗ್ರಾಂ ಕಾರ್ಬೋಹೈಡ್ರೇಟ್‌ಗಳು, 1.5 ಗ್ರಾಂ ಕೊಬ್ಬು, 50 – 60 ಮಿಗ್ರಾಂ ಸೋಡಿಯಂ.
