ಉದಯವಾಹಿನಿ, ಬೆಂಗಳೂರು: ವಿವಾದಿತ ಹಾಡನ್ನು ಹಿಂಪಡೆದುಕೊಂಡು ಹೊಸ ಹಾಡು ಬರೆಯುತ್ತೇನೆ. ಈ ಹಾಡಿನಿಂದ ಯಾರಿಗೆ ನೋವಾಗಿದೆಯೋ ಅವರಲ್ಲಿ ಕ್ಷಮೆ ಕೋರುತ್ತೇನೆ ಎಂದು ಕೆಡಿ ಸಿನಿಮಾದ ನಿರ್ದೇಶಕ ಪ್ರೇಮ್ ಹೇಳಿದ್ದಾರೆ.ಕೆಡಿ ಸಿನಿಮಾದ ಸರ್ಸೆ ಸೆರಗ ಸರ್ಸೆ ಹಾಡಿಗೆ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ವಿಡಿಯೋ ಮೂಲಕ ಪ್ರತಿಕ್ರಿಯಿಸಿದ ಅವರು, ಯಾರೂ ಬೇಕೆಂದು ತಪ್ಪು ಮಾಡುವುದಿಲ್ಲ. ಬಾಟಲ್ ಪದವನ್ನು ಬಳಸದ ಕಾರಣ ತಪ್ಪಾಗಿದೆ ಎಂದು ತಪ್ಪೊಪ್ಪಿಕೊಂಡರು.ಹಿಂದಿಯ ಕೆಲವು ಪದಗಳು ನನಗೆ ಅರ್ಥವಾಗುವುದಿಲ್ಲ. ಹಾಗಾಗಿ ನನಗೆ ಹಿಂದಿಯ ಹಾಡು ಪೂರ್ತಿ ಅರ್ಥವಾಗಿರಲಿಲ್ಲ. ಹೊಸ ಹಾಡನ್ನು ಬರೆದು ದೇಶದಾದ್ಯಂತ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದರು.
ಹಿಂದಿಯಲ್ಲಿ ಬರೆದ ಚಿತ್ರ ಸಾಹಿತಿ ರಕ್ಕಿ ಬಾಲಂ ಕನ್ನಡದಿಂದ ತಥಾವತ್ತಾಗಿ ಅನುವಾದಿಸಿದ್ದೇನೆ ಎಂದು ಹೇಳಿದರು. ಕನ್ನಡದಲ್ಲಿ ಹಿಂದಿಯಷ್ಟು ಅಶ್ಲೀಲತೆ ಇರಲಿಲ್ಲ. ಅವರಿಗೆ ಅದೇನು ಒತ್ತಡವಿತ್ತೋ ಹಾಗೆ ಹೇಳಿದ್ಧಾರೆ. ಕೆಡಿ ಸಿನಿಮಾದ ಎಲ್ಲ ಹಾಡು ಹಿಂದಿಯಲ್ಲಿ ಅವರೇ ಬರೆದಿದ್ದಾರೆ. ಆದರೂ ನನ್ನ ಮೇಲೆಯೇ ಅವರು ಆರೋಪಿಸಿದರು ಎಂದರು. ಕುತೂಹಲ ಇರಲಿ ಎಂಬ ಕಾರಣಕ್ಕೆ ಬಾಟಲ್ ಮೇಲೆ ಎತ್ತಿ ಅನ್ನುವ ಪದವನ್ನು ಕೊನೆಯಲ್ಲಿ ಹಾಕಿದ್ದೇನೆ. ಸಾಹಿತ್ಯ ರಚನೆ ಮಾಡುವಾಗ ಒಬ್ಬ ಸಾಹಿತಿ ಪದಗಳನ್ನು ಎಲ್ಲಿ ಬೇಕಾದರೂ ಹಾಕಬಹುದು. ಯಾರನ್ನೋ ನೋಯಿಸಬೇಕು, ತೊಂದರೆ ಕೊಡಬೇಕು ಎನ್ನುವ ಉದ್ದೇಶದಿಂದ ಈ ಹಾಡನ್ನು ರಚನೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು. ಇಲ್ಲಿವರೆಗೂ ಯಾರನ್ನೂ ನೋಯಿಸುವಂತ ಕೆಲಸ ಮಾಡಿಲ್ಲ. ಸಾಯುವ ತನಕ್ಕೆ ಮಾಡುವುದಿಲ್ಲ. ಯಾವ ಅರ್ಥದಲ್ಲಿ ಆ ಹಾಡನ್ನು ತಗೆದುಕೊಂಡಿದ್ದಾರೋ ಗೊತ್ತಿಲ್ಲ. ಈ ಹಾಡಿನಿಂದ ಕೆಲವರು ನೋವಾಗಿದೆ. ಪ್ರೇಮ್ ಹೀಗೂ ಬರೀತಾನಾ ಅಂತ ಪ್ರಶ್ನೆ ಮಾಡಿದ್ದಾರೆ. ಸಾಹಿತಿ ಆದವನು ಎಲ್ಲ ರೀತಿಯಲ್ಲೂ ಬರೆಯುತ್ತಾನೆ. ಆದರೆ ಕೀಳು ಮಟ್ಟದ ಸಾಹಿತ್ಯವನ್ನು ಯಾರೂ ಬರೆಯಬಾರದು ಎಂದರು.
