ಉದಯವಾಹಿನಿ, ಬೆಂಗಳೂರು: ಮನರೇಗಾ ಸಂಬಂಧ ಕೇಂದ್ರ ಹಾಗೂ ರಾಜ್ಯ ನಡುವೆ ಸಂಘರ್ಷ ಏರ್ಪಟ್ಟ ಬೆನ್ನಲ್ಲೇ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ (ಮನರೇಗಾ) ಟೆಂಡರ್ ಪ್ರಕ್ರಿಯೆ, ಜಾಬ್ ಕಾರ್ಡ್ ಸೇರಿದಂತೆ ಅನೇಕ ಲೋಪಗಳಾಗಿರುವುದನ್ನು ಭಾರತ ಲೆಕ್ಕ ನಿಯಂತ್ರಕ ಹಾಗೂ ಮಹಾಲೆಕ್ಕಪಾಲರ (ಸಿಎಜಿ) ವರದಿ ಉಲ್ಲೇಖಿಸಿದೆ.2019-20ರಿಂದ 2023-24ರ ಅವಧಿಯ ಮನರೇಗಾ ಕಾರ್ಯನಿರ್ವಹಣೆ ಮೇಲಿನ ಸಿಎಜಿ ವರದಿಯನ್ನು ಸರ್ಕಾರ ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಿತು. ಸಿಎಜಿ ತನಿಖೆ ನಡೆಸಿದ ಗ್ರಾಮ ಪಂಚಾಯ್ತಿಗಳಲ್ಲಿ ಹಲವು ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ’ (ಕೆಟಿಪಿಪಿ) ಕಾಯ್ದೆ ಅನುಸರಿಸದೇ ಟೆಂಡರ್ ನಿಯಮ ಉಲ್ಲಂಘಿಸಿದೆ. ಐದು ಲಕ್ಷ ರೂಪಾಯಿ ಮೀರಿದ ಸಾಮಗ್ರಿಗಳ ಖರೀದಿಯನ್ನು ಟೆಂಡರ್ ಕರೆಯದೇ ಖರೀದಿಸಿವೆ ಎಂದು ವರದಿ ತಿಳಿಸಿದೆ.
ಕಳೆದ ಏಳು ವರ್ಷಗಳ ಅವಧಿಯಲ್ಲಿ 1.28 ಕೋಟಿ ರೂಪಾಯಿಗಳಷ್ಟು ಫಲಾನುಭವಿಗಳ ಬಾಕಿ ಪಾವತಿಯಾಗದೇ ಉಳಿದಿದೆ. ಈ ನಷ್ಟಕ್ಕೆ ಹೊಣೆಗಾರಿಕೆಯನ್ನು ನಿಗದಿ ಮಾಡಿ ಬಾಕಿ ಕಾಮಗಾರಿಗಳ ಸ್ಥಿತಿಗತಿಯನ್ನು ಪರಿಶೀಲನೆ ಮಾಡಬೇಕು. ಮನರೇಗಾ ಅಡಿ ಹಲವು ಕಾಮಗಾರಿಗಳು ಇನ್ನೂ ಬಾಕಿ ಇವೆ. ಇವುಗಳನ್ನು ಪೂರ್ಣಗೊಳಿಸಲು ಕಾರ್ಯಯೋಜನೆ ರೂಪಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

ಗುತ್ತಿಗೆ ನೇಮಕಾತಿಗಾಗಿನ ರಾಜ್ಯದ ಮೀಸಲಾತಿ ನೀತಿಯನ್ನು ಅನುಸರಿಸದೇ ಯೋಜನೆಗೆ ಗುತ್ತಿಗೆ ಸಿಬ್ಬಂದಿ ನೇಮಕಾತಿಯನ್ನು ಮಾಡಲಾಗಿದೆ. ಇದರಿಂದ ಮಹಿಳೆಯರು, ಎಸ್​​ಸಿ, ಎಸ್​ಟಿ, ವಿಕಲಚೇತನ ವ್ಯಕ್ತಿಗಳಿಗೆ ಪ್ರಾತಿನಿಧ್ಯ ಸಮರ್ಪಕವಾಗಿ ಸಿಕ್ಕಿಲ್ಲ. ಹೊಸ ಟೆಂಡರ್ ಕರೆಯದೇ ಮಾನವ ಸಂಪನ್ಮೂಲ ಸೇವೆಗಳ ಹೊರಗುತ್ತಿಗೆ ಒಪ್ಪಂದಗಳನ್ನು ಅನಧಿಕೃತವಾಗಿ ವಿಸ್ತರಿಸಲಾಗಿತ್ತು ಎಂದು ಸಿಎಜಿ ವರದಿ ಉಲ್ಲೇಖಿಸಿದೆ. 84.98 ಲಕ್ಷ ಸಕ್ರಿಯ ಕಾರ್ಮಿಕರಲ್ಲಿ 3.11 ಲಕ್ಷ ಕಾರ್ಮಿಕರ ಖಾತೆಗಳೊಂದಿಗೆ ಆಧಾರ್ ಮ್ಯಾಪಿಂಗ್ ರಾಜ್ಯ ಮಟ್ಟದಲ್ಲಿ ಬಾಕಿ ಉಳಿದಿತ್ತು (ಮಾರ್ಚ್ 2024). ಈ ಕಾರಣದಿಂದಾಗಿ ವೇತನ ಪಟ್ಟಿಗಳನ್ನು ತಯಾರಿಸುವ ಬಗ್ಗೆ ಮತ್ತು ಈ ಸಕ್ರಿಯ ಕಾರ್ಮಿಕರಿಗೆ ಪಾವತಿ ಸಾಧ್ಯವಾಗಲಿಲ್ಲ. ತಿರಸ್ಕರಿಸಲಾದ ಮತ್ತು ಪುನರುಜ್ಜೀವನಗೊಳಿಸಲಾದ ಆಧಾರ್ ಆಧಾರಿತ ವೇತನ ಮತ್ತು ಸಾಮಗ್ರಿ ವಹಿವಾ

Leave a Reply

Your email address will not be published. Required fields are marked *

error: Content is protected !!