ಉದಯವಾಹಿನಿ, ನವದೆಹಲಿ: ದೇಶದಲ್ಲಿ ಕಚ್ಚಾ ತೈಲ ಸಾಕಷ್ಟು ಲಭ್ಯವಿದೆ. ಭಾರತವು ಕಚ್ಚಾ ತೈಲಕ್ಕಾಗಿ ಸಾಕಷ್ಟು ಸಂಗ್ರಹಣಾ ಸೌಲಭ್ಯಗಳು ಮತ್ತು ವಿಶ್ವಾಸಾರ್ಹ ಪೂರೈಕೆ ವ್ಯವಸ್ಥೆಗಳನ್ನ ಹೊಂದಿದೆ ಎಂದು ನಾನು ರಾಷ್ಟ್ರಕ್ಕೆ ಮತ್ತು ಸದನಕ್ಕೆ ನಾನು ಭರವಸೆ ನೀಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ರಾಜ್ಯಸಭೆಯಲ್ಲಿ ಈ ಕುರಿತು ಮಾತನಾಡಿದ ಅವರು, ಪಶ್ಚಿಮ ಏಷ್ಯಾದಲ್ಲಿನ ಯುದ್ಧವು ಜಾಗತಿಕವಾಗಿ ಗಂಭೀರ ಇಂಧನ ಬಿಕ್ಕಟ್ಟು ಸೃಷ್ಟಿಸುತ್ತಿರುವುದರಿಂದ ಕೇಂದ್ರ ಸರ್ಕಾರ, ಸಾಧ್ಯವಿರುವ ಎಲ್ಲಾ ಮೂಲಗಳಿಂದ ಇಂಧನ ಖರೀದಿಸಲು ಯತ್ನಿಸುತ್ತಿದೆ. ಮುಂದಿನ ದಿನಗಳಲ್ಲೂ ಪ್ರಯತ್ನ ಮುಂದುವರಿಯಲಿದೆ ಎಂದು ತಿಳಿಸಿದರು.

ಯಾವುದೇ ಒಂದು ಇಂಧನ ಮೂಲದ ಮೇಲಿನ ಅತಿಯಾದ ಅವಲಂಬನೆಯನ್ನ ತಪ್ಪಿಸುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ. ದೇಶಿಯ ಅನಿಲ ಪೂರೈಕೆಯನ್ನ ಹೆಚ್ಚಿಸಲು ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಜೊತೆಗೆ ಪೈಪ್ಡ್ ನೈಸರ್ಗಿಕ ಅನಿಲ (PNG) ಬಳಕೆಯನ್ನ ಉತ್ತೇಜಿಸುತ್ತಿದ್ದೇವೆ ಎಂದರು. ಇದಕ್ಕೂ ಮುನ್ನ, ಭಾರತವು ತನ್ನ ಇಂಧನ ಅಗತ್ಯಗಳಿಗಾಗಿ 27 ದೇಶಗಳಿಂದ ಕಚ್ಚಾ ತೈಲ, LNG ಮತ್ತು LPG ಅನ್ನು ಆಮದು ಮಾಡಿಕೊಳ್ಳುತ್ತಿದೆ. ಇಂದು ದೇಶವು 41 ದೇಶಗಳಿಂದ ತನ್ನ ಇಂಧನ ಆಮದುಗಳನ್ನ ಪಡೆಯುತ್ತಿದೆ ಮಾಹಿತಿ ನೀಡಿದರು.

ಕಳೆದ ದಶಕಗಳಲ್ಲಿ ಇಂಧನ ಬಿಕ್ಕಟ್ಟುಗಳನ್ನ ಪರಿಹರಿಸಲು, ಭಾರತ ಕಚ್ಚಾ ತೈಲದ ಸಂಗ್ರಹಣೆಗೆ ಆದ್ಯತೆ ನೀಡಿದೆ. ಬಿಕ್ಕಟ್ಟಿನ ಸಮಯದಲ್ಲಿ ಸಿದ್ಧತೆಯನ್ನ ಖಚಿತಪಡಿಸಿಕೊಳ್ಳಲು ನಮ್ಮ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್‌ನ ಗಣನೀಯ ನಿಕ್ಷೇಪಗಳನ್ನ ನಿರ್ವಹಿಸುತ್ತಿವೆ. ಕಳೆದ 11 ವರ್ಷಗಳಲ್ಲಿ, 53 ಲಕ್ಷ ಮೆಟ್ರಿಕ್ ಟನ್‌ಗಳಿಗೂ ಹೆಚ್ಚು ಕಾರ್ಯತಂತ್ರದ ಪೆಟ್ರೋಲಿಯಂ ನಿಕ್ಷೇಪಗಳನ್ನ ಸ್ಥಾಪಿಸಲಾಗಿದೆ ವಿವರಿಸಿದರು.

Leave a Reply

Your email address will not be published. Required fields are marked *

error: Content is protected !!