ಉದಯವಾಹಿನಿ, ಟೆಲ್​ ಅವಿವ್​, ಇಸ್ರೇಲ್: ಇರಾನ್ – ಇಸ್ರೇಲ್ – ಅಮೆರಿಕ ಸಂಘರ್ಷ ಮುಂದುವರಿದಿದೆ. ಇರಾನ್ ಕ್ಷಿಪಣಿಯು ಇಸ್ರೇಲ್ ಮೇಲೆ ಮಾಡಿದ್ದು, 6 ಜನರು ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಮಾಧ್ಯಮಗಳು ಇಂದು ವರದಿ ಮಾಡಿವೆ.ಇಸ್ರೇಲ್ ಕೇಂದ್ರ ನಗರ ಟೆಲ್ ಅವೀವ್‌ ಮೇಲೆ ಇರಾನ್ ಕ್ಷಿಪಣಿ ದಾಳಿ ಮಾಡಿದೆ. ಸುಮಾರು 100 ಕಿಲೋಗ್ರಾಂಗಳಷ್ಟು ಸ್ಫೋಟಕಗಳನ್ನು ಹೊತ್ತೊಯ್ಯುವ ಯುದ್ಧಸಾಮಗ್ರಿಯು ಟೆಲ್ ಅವೀವ್ ಮೇಲೆ ದಾಳಿ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿವೆ. ದಾಳಿಯಲ್ಲಿ ಹಲವಾರು ಕಟ್ಟಡಗಳು ಮತ್ತು ವಾಹನಗಳಿಗೆ ಹಾನಿಯಾಗಿದೆ. ಟೆಲ್ ಅವೀವ್‌ನ ಪೂರ್ವದಲ್ಲಿರುವ ರೋಶ್ ಹಯಾಯಿನ್‌ ನಗರದ ಮೇಲೂ ಕ್ಷಿಪಣಿ ಭಾಗಗಳು ಬಿದ್ದಿವೆ ಎಂದು ತಿಳಿಸಿದೆ. ಈ ಮಧ್ಯೆ ಅಮೆರಿಕ ಮತ್ತು ಇಸ್ರೇಲ್ ಕೂಡ ಇರಾನ್ ಮೇಲೆ ದಾಳಿ ಮುಂದುವರಿಸಿದೆ. ದಾಳಿಯಿಂದಾಗಿ ಇರಾನ್​​ನ ಆಂಡಿಮೆಶ್ಕ್ ನಗರದ ಇಮಾಮ್ ಅಲಿ ಆಸ್ಪತ್ರೆಯನ್ನು ಸ್ಥಳಾಂತರಿಸಲಾಗಿದೆ. ಜೊತೆಗೆ ಸದ್ಯಕ್ಕೆ ಇಲ್ಲಿ ಯಾವುದೇ ಸೇವೆ ನೀಡಲಾಗುತ್ತಿಲ್ಲ ಎಂದು ವರದಿಯಾಗಿದೆ.

ಪಶ್ಚಿಮ ಏಷ್ಯಾ ಮತ್ತು ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ದಕ್ಷಿಣ ಲೆಬನಾನ್‌ನ ಪೆಟ್ರೋಲ್ ಬಂಕ್ ಮೇಲೆ ಇಸ್ರೇಲ್ ದಾಳಿ ಮಾಡಿದ್ದರಿಂದ ಬೃಹತ್ ಸ್ಫೋಟ ಸಂಭವಿಸಿ ಅಗ್ನಿ ಅವಘಡ ಉಂಟಾಗಿದೆ. ಇಸ್ರೇಲಿ ಸೈನ್ಯವು ಅಲ್ಲಿನ ನಿವಾಸಿಗಳಿಗೆ ಸ್ಥಳಾಂತರ ಆಗುವಂತೆಯೂ ತಿಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಇನ್ನು ಇರಾನ್ ಕೂಡ ಪ್ರತಿದಾಳಿಯ ಶಪಥ ಮಾಡಿದೆ. ಅಂತೆಯೇ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ತನ್ನ ಪ್ರತೀಕಾರ ದಾಳಿಯನ್ನು “ಆಪರೇಷನ್ ಟ್ರೂ ಪ್ರಾಮಿಸ್ 4” ಎಂದು ಘೋಷಿಸಿದೆ. ಈ ಮೂಲಕ ಇಸ್ರೇಲಿ ತಾಣಗಳು ಮತ್ತು ಈ ಪ್ರದೇಶದ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ದಾಳಿ ಮಾಡುವುದಾಗಿ ಎಚ್ಚರಿಕೆ ನೀಡಿದೆ ಎಂದು ಪ್ರೆಸ್ ಟಿವಿ ವರದಿ ಮಾಡಿದೆ.
ಕ್ಷಿಪಣಿ ಮತ್ತು ಡ್ರೋನ್ ಮೂಲಕ ಇಸ್ರೇಲಿ ಮತ್ತು ಅಮೆರಿಕದ ಇಲ್ಲಿನ ನೆಲೆಗಳ ಮೇಲೆ ದಾಳಿ ಮಾಡಿದ್ದೇವೆ. ಇಸ್ರೇಲ್​ ಪ್ರಮುಖು ಡಿಮೋನಅ, ಟೆಲ್ ಅವೀವ್ ಮತ್ತು ಐಲಾಟ್ ನಗರವನ್ನು ಕೂಡ ಗುರಿಯಾಗಿಸಿಕೊಂಡಿದ್ದೇವೆ ಎಂದು ಇಂದಿನ ಹೇಳಿಕೆಯಲ್ಲಿ ತಿಳಿಸಿದೆ.
ಇದು ಸಂಘರ್ಷದ ಹೊಸ ಹಂತ ಎಂದಿರುವ IRGC, ಇರಾನ್‌ನಲ್ಲಿ ಲಕ್ಷಾಂತರ ಜನರು ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿ ದೊಡ್ಡ ರ‍್ಯಾಲಿಗಳನ್ನು ನಡೆಸುತ್ತಿದ್ದಾಗ ಕ್ಷಿಪಣಿಗಳನ್ನು ಉಡಾಯಿಸಿದ್ದೇವೆ ಎಂದು ತಿಳಿಸಿದೆ.ಇನ್ನು ಇಂದು ಬೆಳಗ್ಗೆ ಕುವೈತ್‌ನಲ್ಲಿ ದಾಳಿಯಿಂದಾಗಿ ದೇಶದ ಹಲವಾರು ಪ್ರದೇಶಗಳಲ್ಲಿ ಏಳು ಓವರ್‌ಹೆಡ್ ವಿದ್ಯುತ್ ಪ್ರಸರಣ ಮಾರ್ಗಗಳು ಬಂದ್ ಆಗಿದ್ದು, ಹಲವೆಡೆ ವಿದ್ಯುತ್ ಕಟ್ ಆಗಿದೆ. ಈ ಬೆಳವಣಿಗೆಗಳ ಮಧ್ಯೆ, ಮಂಗಳವಾರ ಮಾನವ ಹಕ್ಕುಗಳ ಕಾವಲು ಪಡೆಯ ಹೊಸ ವರದಿಯು ಮಾರ್ಚ್ 11 ರಂದು ಇರಾನಿನ ಪಡೆಗಳು ಈ ತಿಂಗಳ ಆರಂಭದಲ್ಲಿ ಹಾರ್ಮುಜ್ ಜಲಸಂಧಿಯಲ್ಲಿ ಮತ್ತು ಸುತ್ತಮುತ್ತಲಿನ ಕನಿಷ್ಠ ಎರಡು ನಾಗರಿಕ ವಾಣಿಜ್ಯ ಹಡಗುಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿವೆ ಎಂದು ಹೇಳಿದೆ. ಇದು ಯುದ್ಧ ಅಪರಾಧಗಳಿಗೆ ಸಮನಾಗಿರುತ್ತದೆ ಎಂದು ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!