ಉದಯವಾಹಿನಿ, ಟಾಲಿವುಡ್‌ನ ‘ಮೆಗಾ ಪವರ್ ಸ್ಟಾರ್’ ರಾಮ್ ಚರಣ್ ಸದ್ಯಕ್ಕೆ ಬುಚ್ಚಿಬಾಬು ಸನಾ ನಿರ್ದೇಶನದ ‘ಪೆದ್ದಿ’ ಸಿನಿಮಾದ ಶೂಟಿಂಗ್‌ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಆದರೆ, ಹೈದರಾಬಾದ್‌ನಲ್ಲಿ ಸಾಹಸ ದೃಶ್ಯವೊಂದನ್ನು ಚಿತ್ರೀಕರಿಸುವಾಗ ಮಂಗಳವಾರ ಚರಣ್ ಅವರಿಗೆ ಸಣ್ಣ ಅಪಘಾತ ಸಂಭವಿಸಿದೆ.
ಸೋಷಿಯಲ್‌ ಮೀಡಿಯಾದಲ್ಲಿ ‘ಚರಣ್ ಕಣ್ಣಿಗೆ ಗಾಯವಾಗಿದೆ’ ಎಂಬ ಸುದ್ದಿ ಹಬ್ಬಿದ್ದರಿಂದ ಫ್ಯಾನ್ಸ್ ಗಾಬರಿ ಪಟ್ಟಿದ್ದರೆ ಆದರೆ ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಚರಣ್ ಆಪ್ತ ಮೂಲಗಳು ಸ್ಪಷ್ಟಪಡಿಸಿವೆ.
ಫೈಟ್ ಸೀನ್ ಚಿತ್ರೀಕರಣ ಮಾಡುವಾಗ ಚರಣ್ ಅವರ ಕಣ್ಣಿನ ಮೇಲ್ಬಾಗದಲ್ಲಿ ಸಣ್ಣದೊಂದು ಗಾಯವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಣ್ಣಿನ ಹುಬ್ಬಿನ ಬಳಿ ನಾಲ್ಕು ಹೊಲಿಗೆ ಹಾಕಲಾಗಿದೆ. ಆದರೆ ಕಣ್ಣಿಗೆ ಯಾವುದೇ ತೊಂದರೆಯಾಗಿಲ್ಲ, ಅವರು ಸೇಫ್ ಆಗಿದ್ದಾರೆ. ಎಂದು ಚಿತ್ರತಂಡ ತಿಳಿಸಿದೆ.
ಗಾಯವಾದರೂ ಲೆಕ್ಕಿಸದ ಚರಣ್, ಚಿಕಿತ್ಸೆ ಮುಗಿದ ತಕ್ಷಣವೇ ಮತ್ತೆ ಕ್ಯಾಮೆರಾ ಮುಂದೆ ನಿಂತು ಶೂಟಿಂಗ್ ಮುಂದುವರಿಸಿದ್ದಾರೆ. ಈ ವೃತ್ತಿಪರತೆ ನೋಡಿ ಚಿತ್ರತಂಡವೇ ಬೆರಗಾಗಿದೆ.

Leave a Reply

Your email address will not be published. Required fields are marked *

error: Content is protected !!