ಉದಯವಾಹಿನಿ, ಮುಂಬೈ: ಇರಾನ್‌ನಿಂದ ನಾವು ಕಚ್ಚಾ ತೈಲವನ್ನು ಖರೀದಿಸಿಲ್ಲ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಸ್ಪಷ್ಟಪಡಿಸಿದೆ.
ಇರಾನ್ ಮೂಲದ ಕಚ್ಚಾ ತೈಲವನ್ನು ಖರೀದಿಸಿರುವುದಾಗಿ ಆರೋಪಿಸಿರುವ ಮಾಧ್ಯಮ ವರದಿಗಳನ್ನು ನಿರಾಕರಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಈ ಹೇಳಿಕೆಗಳನ್ನು ಆಧಾರರಹಿತ ಮತ್ತು ದಾರಿತಪ್ಪಿಸುವಂತಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯು ಇರಾನ್ ಮೂಲದ ಕಚ್ಚಾ ತೈಲವನ್ನು ಖರೀದಿಸಿದೆ ಎಂಬ ಇತ್ತೀಚಿನ ಮಾಧ್ಯಮ ವರದಿಗಳನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತದೆ. ಈ ವರದಿಗಳು ಆಧಾರರಹಿತವಾಗಿದ್ದು, ದಾರಿತಪ್ಪಿಸುವ ಮತ್ತು ತಪ್ಪಾದ ಹೇಳಿಕೆಗಳಿಗೆ ಕಾರಣವಾಗಿವೆ ಎಂದು ತನ್ನ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ. ಅಮೆರಿಕವು ತೈಲದ ಮೇಲಿನ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ತೆಗೆದುಹಾಕಿದ ಕೆಲವು ದಿನಗಳ ನಂತರ ರಿಲಯನ್ಸ್ 5 ಮಿಲಿಯನ್ ಬ್ಯಾರೆಲ್ ಇರಾನಿನ ಕಚ್ಚಾ ತೈಲವನ್ನು ಖರೀದಿಸಿದೆ ಎಂದು ವರದಿಯಾಗಿತ್ತು.

Leave a Reply

Your email address will not be published. Required fields are marked *

error: Content is protected !!