ಉದಯವಾಹಿನಿ, ಕೋಟಾ (ರಾಜಸ್ಥಾನ): ಇರಾನ್​ ಮೇಲೆ ಇಸ್ರೇಲ್​ ಮತ್ತು ಅಮೆರಿಕ ನಡೆಸುತ್ತಿರುವ ಸಂಘರ್ಷವು ಭಾರತದ ಮೂಲ ಸೌಕರ್ಯ ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತಿದೆ. ತೈಲ ಪೂರೈಕೆಯ ವ್ಯತ್ಯಯ ಇದೀಗ ರಾಜಸ್ಥಾನದ ಕೋಟಾ ವಿಭಾಗದಲ್ಲಿ ರಸ್ತೆ ನಿರ್ಮಾಣ ಯೋಜನೆ ವಿಳಂಬಕ್ಕೆ ಕಾರಣವಾಗಿದೆ. ರಸ್ತೆ ನಿರ್ಮಾಣಕ್ಕೆ ಬೇಕಾಗುವ ಡಾಂಬರು ಮತ್ತು ಸಂಬಂಧಿತ ಪೆಟ್ರೋಕೆಮಿಕಲ್ ಉತ್ಪನ್ನಗಳ ತೀವ್ರ ಕೊರತೆ ಇದಕ್ಕೆ ಕಾರಣವಾಗಿದೆ
ಡಾಂಬರು ಪೂರೈಕೆ ವ್ಯತ್ಯಯದಿಂದ ರಾಷ್ಟ್ರೀಯ ಹೆದ್ದಾರಿ 27 ಮತ್ತು ರಾಷ್ಟ್ರೀಯ ಹೆದ್ದಾರಿ 148ಡಿ ಯಲ್ಲಿ ನಿರ್ಮಾಣ ಕೆಲಸ ಸ್ಥಗಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಗುತ್ತಿಗೆದಾರರು ಅಗತ್ಯ ವಸ್ತುಗಳು ಸಿಗದೇ ಒದ್ದಾಡುವಂತೆ ಆಗಿದೆ. ಈ ರಸ್ತೆ ರಾಜಸ್ಥಾನದಲ್ಲಿ ಇತರ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಕನೆಕ್ಟರ್ ಆಗಿದ್ದು, ನಿರ್ಣಾಯಕ ಡಾಂಬರೀಕರಣ ಹಂತದಲ್ಲಿದ್ದ ಯೋಜನೆಗಳು ತೀವ್ರವಾಗಿ ಹಾನಿಗೊಳಗಾಗಿವೆ.

ಮೆಸರ್ಸ್ ಮುರಾರಿ ಲಾಲ್ ಅಗರ್ವಾಲ್ ಕನ್ಸ್ಟ್ರಕ್ಷನ್ ಕಂಪನಿಯ ಯೋಜನಾ ವ್ಯವಸ್ಥಾಪಕ ಪವನ್ ಅಗರ್ವಾಲ್ ಮಾತನಾಡಿ, ಎನ್​ಎಚ್​ 27 ರಸ್ತೆ ನಿರ್ಮಾಣಕ್ಕೆ ಸಂಸ್ಥೆಗೆ ಸುಮಾರು 20,000 ಟನ್ ಡಾಂಬರು ಅಗತ್ಯವಿದೆ. ಇಲ್ಲಿಯವರೆಗೆ ಕೇವಲ 7,000 ಟನ್ ಮಾತ್ರ ಬಂದಿದೆ. ಉಳಿದ 13,000 ಟನ್‌ಗಳನ್ನು ಇನ್ನೂ ಬರಬೇಕಿದೆ/ ಈ ಹಿಂದೆ, ಪ್ರತಿ ಟನ್‌ಗೆ 40,000 ರೂ.ಗೆ ಡಾಂಬರು ಲಭ್ಯವಿತ್ತು. ಯುದ್ಧದ ನಂತರ, ಬೆಲೆಗಳು 52,000 ರೂ.ಗೆ ಏರಿಕೆ ಕಂಡಿದ್ದು, ಆ ದರದಲ್ಲೂ ಅದು ಲಭ್ಯವಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.ಡಾಂಬರ್​ ಕೊರತೆ ಹೊರತಾಗಿಯೂ ಭಾರೀ ಯಂತ್ರೋಪಕರಣಗಳ ಚಾಲನೆ ಮಾಡಲು ಅಗತ್ಯವಾದ ದ್ರವ ಡೀಸೆಲ್ ತೈಲ (ಎಲ್​ಡಿಒ) ಕೊರತೆ ಕಾಡಿದೆ. ನಮಗೆ 27 ಲಕ್ಷ ಲೀಟರ್‌ಗಳ ಎಲ್​ಡಿಒ ಅಗತ್ಯವಿದ್ದು, ಇಲ್ಲಿಯವರೆಗೆ ಕೇವಲ 10 ಲಕ್ಷ ಲೀಟರ್‌ಗಳನ್ನು ಮಾತ್ರ ಸಿಕ್ಕಿದೆ. ಬೆಲೆಗಳು ಪ್ರತಿ ಟನ್‌ಗೆ 45,000 ರೂ.ಗಳಿಂದ 60,000 ರೂ.ಗಳಿಗೆ ಏರಿಕೆ ಕಂಡಿದ್ದು, ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!