ಉದಯವಾಹಿನಿ,  ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯು ಭದ್ರತಾ ಕಾಳಜಿಯಿಂದಾಗಿ ಅಲ್ಲಿನ ತಮ್ಮ ನಾಗರಿಕರಿಗೆ ಲೆವೆಲ್ -3 ಪ್ರಯಾಣ ಸಲಹೆಯನ್ನು ನೀಡಿದೆ. ತಮ್ಮ ಪ್ರಯಾಣವನ್ನು ಮರುಪರಿಶೀಲಿಸುವಂತೆ ಮತ್ತು ಜಾಗರೂಕರಾಗಿರುವಂತೆ ಸೂಚನೆ ನೀಡಿದೆ.

“ಎಲ್ಲ ಅಮೆರಿಕನ್ನರು ಜಾಗರೂಕರಾಗಿರಿ, ಸ್ಥಳೀಯ ಅಧಿಕಾರಿಗಳ ಸೂಚನೆಗಳನ್ನು ಪಾಲಿಸಬೇಕು ಮತ್ತು ಅಮೆರಿಕದ ರಾಯಭಾರ ಕಚೇರಿ ಅಥವಾ ದೂತಾವಾಸದ ಇತ್ತೀಚಿನ ಮಾರ್ಗದರ್ಶನವನ್ನು ಪರಿಶೀಲಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ” ಎಂದು ಆ ದೇಶಗಳಲ್ಲಿನ ಅಮೆರಿಕದ ರಾಯಭಾರ ಕಚೇರಿಗಳ ಮೂಲಕ ಹೊರಡಿಸಲಾದ ಪ್ರತ್ಯೇಕ ಪ್ರಯಾಣ ಎಚ್ಚರಿಕೆಗಳಲ್ಲಿ ವಿದೇಶಾಂಗ ಇಲಾಖೆ ತಿಳಿಸಿದೆ.
ಬಿಡುಗಡೆ ಮಾಡಿದ ಲೆವೆಲ್ -3 ಪ್ರಯಾಣ ಸಲಹೆಯಲ್ಲಿ, ಯುಎಇಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯು, ಕ್ಷಿಪಣಿ ಅಥವಾ ಡ್ರೋನ್ ದಾಳಿಯ ಬಗ್ಗೆ ಎಚ್ಚರಿಕೆ ಬಂದರೆ, ದೇಶದಲ್ಲಿ ಉಳಿಯಲು ಆಯ್ಕೆ ಮಾಡಿಕೊಳ್ಳುವವರು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಲು ಸಿದ್ಧರಾಗಿರಬೇಕು ಎಂದೂ ಹೇಳಿದೆ.

ಸದ್ಯದ ಪರಿಸ್ಥಿತಿಯ ಹಿನ್ನೆಲೆ, ಸಂಭವನೀಯ ಕ್ಷಿಪಣಿ ದಾಳಿ ಭೀತಿ ಇದೆ. ಹಾಗಾಗಿ ನಿಮ್ಮ ಪ್ರಯಾಣವನ್ನು ಮತ್ತೊಂದು ಬಾರಿ ಮರುಪರಿಶೀಲಿಸಿ. ನೀವು ಯುಎಇಯಲ್ಲಿಯೇ ಉಳಿಯಲು ಆಯ್ಕೆ ಮಾಡಿಕೊಂಡರೆ, ನಿಮ್ಮ ಸೆಲ್ ಫೋನ್‌ನಲ್ಲಿ ಬರುವ ಅಧಿಸೂಚನೆಯನ್ನು ಸ್ವೀಕರಿಸಿ. ಕ್ಷಿಪಣಿ ದಾಳಿ ಬಗೆಗೆ ಅಥವಾ ಡ್ರೋನ್ ದಾಳಿಯ ಬಗೆಗೆ ತಿಳಿಸಿದಾಗ ಸುರಕ್ಷಿತ ಕಟ್ಟಡದೊಳಗೆ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಲು ನೀವು ಸಿದ್ಧರಾಗಿರಬೇಕು ಎಂದು ಅಮೆರಿಕದ ಕಾನ್ಸುಲರ್ ವ್ಯವಹಾರಗಳ ಇಲಾಖೆ ಎಕ್ಸ್​ ಖಾತೆಯಲ್ಲಿ ಪೋಸ್ಟ್‌ ಮಾಡಿದೆ.

Leave a Reply

Your email address will not be published. Required fields are marked *

error: Content is protected !!