ಉದಯವಾಹಿನಿ, ಜೆರುಸಲೆಂ: ಮಧ್ಯಪ್ರಾಚ್ಯದ ಸಂಘರ್ಷ ಇನ್ನಷ್ಟು ದಿನ ಹೆಚ್ಚುವ ಸಾಧ್ಯತೆಗಳಿದೆ, ಕದನ ವಿರಾಮದ ದಿನಾಂಕ ಪದೇ ಪದೇ ಮುಂದೂಡುತ್ತಿರುವ ಅಮೆರಿಕ – ಇರಾನ್ _ ಮುಂದೆ ಮಾತುಕತೆ ಪ್ರಸ್ತಾಪ ಇಡುತ್ತಿದೆ. ಆದರೆ ಸಂಪೂರ್ಣ ಶರಣಾಗತಿ ಸಾಧ್ಯವಿಲ್ಲ ಎಂದಿರುವ ಇರಾನ್ ಮಾತುಕತೆಯನ್ನು ಧಿಕ್ಕರಿಸಿ ದಾಳಿ ಮುಂದುವರಿಸಿದೆ. ಈ ನಡುವೆ ಇಸ್ರೇಲ್‌ಗೆ ಗೆ ಗಂಭೀರ ಎಚ್ಚರಿಕೆಯೊಂದು ಸಿಕ್ಕಿದೆ.

ಅಮೆರಿಕ – ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ 28 ನೇ ದಿನಕ್ಕೆ ತಲುಪಿದೆ. ಕದನ ವಿರಾಮದ ಮಾತುಕತೆಗಳ ನಡುವೆ ತೀವ್ರ ಸ್ವರೂಪದ ದಾಳಿಗಳು ನಡೆಯುತ್ತಿವೆ. 15 ಷರತ್ತುಗಳೊಂದಿಗೆ ಕದನ ವಿರಾಮದ ಪ್ರಸ್ತಾಪ ಇಟ್ಟಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (ಮತ್ತೆ ಕದನ ವಿರಾಮದ ದಿನಾಂಕ ಮುಂದೂಡಿದ್ದಾರೆ.ಇಂಧನ ಮೂಲಸೌಕರ್ಯಗಳನ್ನ ಗುರಿಯಾಗಿಸಿಕೊಂಡು ಸೇನಾ ಕಾರ್ಯಾಚರಣೆ ಕೈಗೊಳ್ಳಲು ಸಿದ್ಧವಾಗಿದ್ದ ಅಮೆರಿಕ, ಇದೀಗ ಇದ್ದಕ್ಕಿದ್ದಂತೆ 10 ದಿನಗಳ ಗಡುವು ವಿಸ್ತರಿಸುವ ನಿರ್ಧಾರ ಕೈಗೊಂಡಿದೆ. ಈ ಮೂಲಕ ಟ್ರಂಪ್ ಅವರು ಯುದ್ಧದ ನಡುವೆಯೂ ರಾಜತಾಂತ್ರಿಕ ಮಾರ್ಗಕ್ಕೆ ಒತ್ತು ನೀಡುತ್ತಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಟ್ರಂಪ್ ಅವರು, ಈ ನಿರ್ಧಾರವನ್ನು ಇರಾನ್‌ನ ವಿನಂತಿಯ ಮೇರೆಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಮಾತುಕತೆಗಳಿಗೆ ಇನ್ನಷ್ಟು ಸಮಯ ನೀಡುವುದರಿಂದ ಸಮಸ್ಯೆಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಬಹುದು ಎಂಬ ನಂಬಿಕೆಯನ್ನ ಅವರು ವ್ಯಕ್ತಪಡಿಸಿದ್ದಾರೆ. ಈ ಅವಧಿಯಲ್ಲಿ ಇರಾನ್ ತನ್ನ ನಿಲುವಿನಲ್ಲಿ ಬದಲಾವಣೆ ತರಬಹುದು ಮತ್ತು ಅಮೆರಿಕ ನೀಡಿದ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಬಹುದು ಎಂಬ ನಿರೀಕ್ಷೆ ವ್ಯಕ್ತವಾಗುತ್ತಿದೆ. ಆದರೆ, ಇರಾನ್ ಈ ಹೇಳಿಕೆಗಳಿಗೆ ಸ್ಪಷ್ಟ ಬೆಂಬಲ ನೀಡಿಲ್ಲ. ಅಮೆರಿಕ ನೀಡಿದ ಪ್ರಸ್ತಾವನೆಗಳು ಏಕಪಕ್ಷೀಯವಾಗಿವೆ ಮತ್ತು ತಮ್ಮ ಹಿತಾಸಕ್ತಿಗಳಿಗೆ ಅನುಕೂಲಕರವಾಗಿಲ್ಲ ಎಂದು ಟೀಕಿಸಿದೆ.

Leave a Reply

Your email address will not be published. Required fields are marked *

error: Content is protected !!