ಉದಯವಾಹಿನಿ, ಗಾಜಾ, : ಮಧ್ಯ ಗಾಜಾದಲ್ಲಿ 18 ತಿಂಗಳ ಬಾಲಕನೊಬ್ಬನಿಗೆ ಇಸ್ರೇಲಿ ಪಡೆಗಳು ಚಿತ್ರಹಿಂಸೆ ನೀಡಿ, ಆತನ ತಂದೆಯಿಂದ ತಪ್ಪೊಪ್ಪಿಗೆ ಪತ್ರ ಬರೆಯಿಸುವಂತೆ ಒತ್ತಾಯಿಸಿವೆ ಎಂದು ಪ್ಯಾಲೆಸ್ಟೈನ್ ಟಿವಿ ವರದಿ ಮಾಡಿದೆ. ವರದಿಯ ಪ್ರಕಾರ, ಕರೀಮ್ ಎಂದು ಗುರುತಿಸಲಾದ ಮಗುವನ್ನು ಅವನ ತಂದೆ ಒಸಾಮಾ ಅಬು ನಾಸರ್ ಅವರೊಂದಿಗೆ ಅಲ್-ಮಘಾಜಿ ನಿರಾಶ್ರಿತರ ಶಿಬಿರದ ಬಳಿ ಬಂಧಿಸಲಾಗಿತ್ತು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ದೃಶ್ಯಗಳಲ್ಲಿ ಮಗುವಿನ ದೇಹದ ಮೇಲೆ ಗಾಯಗಳನ್ನು ತೋರಿಸಿವೆ.

ಇತ್ತೀಚೆಗೆ ಜೀವನೋಪಾಯಕ್ಕಾಗಿ ನಂಬಿಕೊಂಡಿದ್ದ ಕುದುರೆಯ ಸಾವಿನಿಂದ ಅಬು ನಾಸರ್ ಭಾವನಾತ್ಮಕವಾಗಿ ಆಘಾತಕ್ಕೊಳಗಾಗಿದ್ದರು. ತನ್ನ ಚಿಕ್ಕ ಮಗನನ್ನು ಸರಬರಾಜು ಖರೀದಿಸಲು ಕರೆದುಕೊಂಡು ಹೋಗುತ್ತಿದ್ದಾಗ, ಮನೆಯ ಬಳಿ ಇಸ್ರೇಲಿ ಗುಂಡಿನ ದಾಳಿ ನಡೆಯಿತು. 18 ತಿಂಗಳ ಮಗುವನ್ನು ನೆಲದ ಮೇಲೆ ಬಿಟ್ಟು ಮಿಲಿಟರಿ ಚೆಕ್‌ಪಾಯಿಂಟ್ ಕಡೆಗೆ ನಡೆಯಲು ಸೈನಿಕರು ಅವರಿಗೆ ಆದೇಶಿಸದರು ಎಂದು ಹೇಳಲಾಗಿದೆ. ಅಲ್ಲಿ ಆತನನ್ನು ವಿವಸ್ತ್ರಗೊಳಿಸಿ ವಿಚಾರಣೆ ನಡೆಸಲಾಯಿತು.ವಿಚಾರಣೆಯ ಸಮಯದಲ್ಲಿ, ಇಸ್ರೇಲಿ ಪಡೆಗಳು ಮಗುವನ್ನು ಅವನ ತಂದೆಯ ಸಮ್ಮುಖದಲ್ಲಿ ಚಿತ್ರಹಿಂಸೆ ನೀಡಿವೆ ಎನ್ನಲಾಗಿದೆ. ಬಾಲಕನ ಕಾಲಿನಲ್ಲಿ ಸಿಗರೇಟಿನಿಂದ ಸುಟ್ಟ ಗಾಯಗಳು ಮತ್ತು ಮೊಳೆಯನ್ನು ಚುಚ್ಚಿ ಉಂಟಾದ ಗಾಯಗಳನ್ನು ದೃಢಪಡಿಸಿದೆ.

Leave a Reply

Your email address will not be published. Required fields are marked *

error: Content is protected !!