ಉದಯವಾಹಿನಿ, ಟೆಹರಾನ್,: ಮಧ್ಯಪ್ರಾಚ್ಯದ ಸಂಘರ್ಷದ ನಡುವೆ ಇರಾನ್ ಭಾರತಕ್ಕೆ ಧನ್ಯವಾದ ತಿಳಿಸಿದೆ. ಇಸ್ರೇಲ್ ಮೇಲೆ ದಾಳಿ ನಡೆಸುತ್ತಿರುವ ಕ್ಷಿಪಣಿಗಳ ಮೇಲೆ ಧನ್ಯವಾದ ಭಾರತ ಎಂದು ಬರೆಯಲಾಗಿದೆ. ಇರಾನ್‌ಗೆ (Iran War) ಒಗ್ಗಟ್ಟನ್ನು ತೋರಿಸಿದ ದೇಶಗಳಿಗೆ ಧನ್ಯವಾದ ಹೇಳುವ ಸಂದೇಶಗಳನ್ನು ಹೊತ್ತ ಕ್ಷಿಪಣಿಗಳನ್ನು ಇಸ್ರೇಲ್ ಕಡೆಗೆ ಹಾರಿಸಿತು. ಈ ಕ್ಷಿಪಣಿಯಲ್ಲಿ ಭಾರತದ ಜನರಿಗೆ ಧನ್ಯವಾದಗಳು ಎಂಬ ಸಂದೇಶವನ್ನು ಬರೆಯಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ದೃಶ್ಯಗಳ ಪ್ರಕಾರ, ಸ್ಪೇನ್, ಪಾಕಿಸ್ತಾನ ಮತ್ತು ಜರ್ಮನಿಯ ಜನರನ್ನು ಉದ್ದೇಶಿಸಿ ಇದೇ ರೀತಿಯ ಸಂದೇಶವನ್ನು ಬರೆಯಲಾಗಿದೆ. ಇರಾನ್‌ನ ಏರೋಸ್ಪೇಸ್ ಫೋರ್ಸ್‌ನ ಸಿಬ್ಬಂದಿ ಉಡಾವಣೆ ಮಾಡುವ ಮೊದಲು ಕ್ಷಿಪಣಿಗಳ ಮೇಲೆ ಈ ಸಂದೇಶಗಳನ್ನು ಬರೆಯುವುದನ್ನು ವಿಡಿಯೊ ದೃಶ್ಯಾವಳಿಗಳು ತೋರಿಸಿವೆ.
ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಶುಕ್ರವಾರ (ಮಾ.27) 83ನೇ ಹಂತದ ದಾಳಿ ನಡೆಸಿದೆ ಎಂದು ತಿಳಿಸಿದೆ. ದೀರ್ಘ ಮತ್ತು ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಇಸ್ರೇಲ್‌ನಲ್ಲಿರುವ ಸ್ಥಳಗಳನ್ನು ಹಾಗೂ ಅಮೆರಿಕದ ಪಡೆಗಳು ಬಳಸುವ ತಾಣಗಳು ಸೇರಿದಂತೆ ಕೊಲ್ಲಿಯಾದ್ಯಂತದ ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿವೆ.
