ಉದಯವಾಹಿನಿ, ಯುದ್ಧಭೂಮಿಯಲ್ಲಿ ಸೈನಿಕರ ಕಣ್ಣು, ಕಿವಿಯಂತೆ ಕೆಲಸ ಮಾಡುವ ಅಮೆರಿಕದ ಕಣ್ಗಾವಲು ವಿಮಾನ E3-ಸೆಂಟ್ರಿ ಮೇಲೆ ಇರಾನ್ ಕ್ಷಿಪಣಿ ದಾಳಿ ಮಾಡಿ ನಾಶಪಡಿಸಿದೆ. ಈ ಸಂದರ್ಭದಲ್ಲಿ 10 ಅಮೆರಿಕದ ಯೋಧರು ಗಾಯಗೊಂಡಿದ್ದಾರೆ. ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯುನೆಲೆಯಲ್ಲಿ ಈ ಘಟನೆ ನಡೆದಿದೆ. ಅಮೆರಿಕದ ನಿಯತಕಾಲಿಕೆ ವಾಲ್ ಸ್ಟ್ರೀಟ್ ಜರ್ನಲ್ ದಾಳಿಯನ್ನು ಬಹಿರಂಗಪಡಿಸಿದೆ.
E3-ಸೆಂಟ್ರಿ ವಿಮಾನದ ಕೆಲಸವೇನು?: E3-ಸೆಂಟ್ರಿ ಅವಾಕ್ಸ್ ಎಂಬುದು ಯುದ್ಧಭೂಮಿಯಲ್ಲಿ ಸಾಮಾನ್ಯ ವಿಮಾನವಲ್ಲ. ಬೋಯಿಂಗ್-707 ಮಾದರಿಯನ್ನು ಮಾರ್ಪಡಿಸಿ ವಾಯುಪ್ರದೇಶದಲ್ಲಿ ಕಮಾಂಡ್ ಸೆಂಟರ್‌ನಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಶತ್ರು ಡ್ರೋನ್, ಕ್ಷಿಪಣಿ, ಯುದ್ಧವಿಮಾನ ಹಾಗು ಟ್ಯಾಂಕರ್‌ಗಳ ಚಲನವಲನಗಳನ್ನು ಇದು ಪತ್ತೆ ಹಚ್ಚುತ್ತದೆ. ಇದೊಂದೇ ವಿಮಾನ 250 ಮೈಲುಗಳ ವ್ಯಾಪ್ತಿಯಲ್ಲಿ ವಾಯುಪ್ರದೇಶದಲ್ಲಿ ನಡೆಯುತ್ತಿರುವ ಯಾವುದೇ ಬೆಳವಣಿಗೆಯನ್ನು ಕಂಡು ಹಿಡಿಯಬಲ್ಲದು.
ಹಾಗಾಗಿ, E3-ಸೆಂಟ್ರಿ ಮೇಲೆ ಇರಾನ್ ನಡೆಸಿದ ದಾಳಿ ಯುದ್ಧದಲ್ಲಿ ಅಮೆರಿಕದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಮೆರಿಕ ವಾಯುಪಡೆಯ ಕರ್ನಲ್ ಜಾನ್ ವೆನಬಲ್ ತಿಳಿಸಿದ್ದಾರೆ. ವಿಶೇಷವಾಗಿ ಗಲ್ಫ್ ಪ್ರದೇಶದ ಮೇಲೆ ಕಣ್ಣಿಡುವಲ್ಲಿ ತನ್ನ ಪಡೆಗಳು ಮುಂದೆ ಸಮಸ್ಯೆಗಳನ್ನು ಎದುರಿಸಬಹುದು ಎಂದು ಹೇಳಿದ್ದಾರೆ.
ಪ್ರಿನ್ಸ್ ಸುಲ್ತಾನ್ ವಾಯುನೆಲೆ ಅಮೆರಿಕ ನಡೆಸುವ ವಾಯುಪ್ರದೇಶದ ಕಾರ್ಯಾಚರಣೆಗಳಿಗೆ ನಿರ್ಣಾಯಕ. ಇರಾನ್ ಕಡೆಗೆ ಹೋಗುವ ವಿಮಾನಗಳಿಗೆ ಇಂಧನ ತುಂಬುವುದು, ಗುಪ್ತಚರ ಮಾಹಿತಿ ಸಂಗ್ರಹ ಮತ್ತು ದಾಳಿಯ ಸಮನ್ವಯವನ್ನು ಇಲ್ಲಿಂದಲೇ ಮಾಡಲಾಗುತ್ತದೆ.
ಈವರೆಗೆ ಅಮೆರಿಕದ 303 ಸೈನಿಕರಿಗೆ ಗಾಯ: ಅಮೆರಿಕದ ನೆಲೆಗಳನ್ನು ಗುರಿಯಾಗಿಸಿ ಇರಾನ್ ನಡೆಸಿದ ದಾಳಿಯಲ್ಲಿ ಇದುವರೆಗೆ 303 ಸೈನಿಕರು ಗಾಯಗೊಂಡಿದ್ದಾರೆ ಎಂದು ಕೇಂದ್ರ ಕಮಾಂಡ್ ನಿನ್ನೆ ತಿಳಿಸಿತ್ತು. ಇವರಲ್ಲಿ 273 ಮಂದಿ
ಅಮೆರಿಕದಿಂದ ರಹಸ್ಯವಾಗಿ ಭೂದಾಳಿಗೆ ಯೋಜನೆ-ಇರಾನ್: ಯುದ್ಧ ನಿಲ್ಲಿಸುವ ಕುರಿತು ಮಾತನಾಡುತ್ತಿರುವ ಅಮೆರಿಕ ರಹಸ್ಯವಾಗಿ ಭೂ ದಾಳಿಗೆ ಯೋಜನೆ ರೂಪಿಸುತ್ತಿದೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಆರೋಪಿಸಿದ್ದಾರೆ.
ಶತ್ರುಗಳು ನಮಗೆ ಬಹಿರಂಗವಾಗಿ ಮಾತುಕತೆಯ ಸಂದೇಶವನ್ನು ಕಳುಹಿಸುತ್ತಿದ್ದಾರೆ. ಆದರೆ ಇದೇ ವೇಳೆ ರಹಸ್ಯವಾಗಿ ನೆಲದ ಮೇಲೆ ದಾಳಿಗೆ ಯೋಜನೆ ರೂಪಿಸುತ್ತಿದ್ದಾರೆ. ಒಂದು ವೇಳೆ ಅಮೆರಿಕ ದಾಳಿಗೆ ಮುಂದಾದರೆ ನಮ್ಮ ಯೋಧರು ತಕ್ಕ ಪಾಠ ಕಲಿಸಲಿದ್ದಾರೆ. ಇರಾನ್ ಸಶಸ್ತ್ರ ಪಡೆಗಳು ಅಮೆರಿಕದ ಪಡೆಗಳು ಮತ್ತು ಅವರ ಪ್ರಾದೇಶಿಕ ಮಿತ್ರರಾಷ್ಟ್ರಗಳನ್ನು ಶಿಕ್ಷಿಸಲಿವೆ ಎಂದು ಅವರು ಹೇಳಿದ್ದಾರೆ.
ಸಂಘರ್ಷ ಉಲ್ಬಣಗೊಳ್ಳುತ್ತಿದ್ದಂತೆ ಅಮೆರಿಕ ಸಂಭಾವ್ಯ ನೆಲದ ಮೇಲಿನ ಸೇನಾ ಕಾರ್ಯಾಚರಣೆಗಳನ್ನು ಪರಿಗಣಿಸುತ್ತಿದೆ ಎಂಬ ವರದಿಗಳು ಹೆಚ್ಚುತ್ತಿರುವ ಮಧ್ಯೆ ಈ ಹೇಳಿಕೆ ಹೊರ ಬಂದಿದೆ.30 ದಿನಗಳಿಂದ ಇರಾನ್‌ನಲ್ಲಿ ಇಂಟರ್ನೆಟ್ ಇಲ್ಲ: ಯುದ್ಧ ಶುರುವಾದ ನಂತರ ಇರಾನ್‌ನಲ್ಲಿ ಇಂಟರ್ನೆಟ್ ಸೌಲಭ್ಯವನ್ನು ಹೆಚ್ಚೂ ಕಡಿಮೆ ಪೂರ್ಣ ಪ್ರಮಾಣದಲ್ಲಿ ನಿರ್ಬಂಧಿಸಲಾಗಿದೆ. ಇದೀಗ ಇರಾನ್ ಇಂಟರ್‌ನೆಟ್ ಇಲ್ಲದೆ 30 ದಿನಗಳನ್ನು ಪೂರೈಸಿದೆ ಎಂದು ವರದಿಯಾಗಿದೆ.ಇಸ್ಲಾಮಾಬಾದ್‌ನಲ್ಲಿ ಟರ್ಕಿ-ಪಾಕ್ ವಿದೇಶಾಂಗ ಸಚಿವರ ಭೇಟಿ: ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅವರನ್ನು ಇಂದು ಟರ್ಕಿ ವಿದೇಶಾಂಗ ಸಚಿವ ಹಕನ್ ಫಿದನ್ ಭೇಟಿ ಮಾಡಿದ್ದಾರೆ.
