ಉದಯವಾಹಿನಿ, ಹುಬ್ಬಳ್ಳಿ: 6 ಲಕ್ಷ ರೂ. ಲಂಚ ಪಡೆಯುವಾಗಲೇ ಕಮರ್ಷಿಯಲ್ ಟ್ಯಾಕ್ಸ್ ಡಿಸಿ ಲೋಕಾ ಬಲೆಗೆ ಬಿದ್ದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಅಂಕೋಲಾ ಮೂಲದ ಉದ್ಯಮಿ ವಿಶ್ವಜೀತ್ ನಾಯಕ್ ಎಂಬುವವರಿಂದ 6 ಲಕ್ಷ ಲಂಚ ರೂ. ಪಡೆಯುವಾಗಲೇ ಕಮರ್ಷಿಯಲ್ ಟ್ಯಾಕ್ಸ್ ಡೆಪ್ಯುಟಿ ಕಮೀಷನರ್ ಭರತ್ ಹೆಗ್ಗಡೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 2019ರಲ್ಲಿ 8 ಹೆವಿ ಟಿಪ್ಪರ್ ವಾಹನಗಳನ್ನು ವಿಶ್ವಜೀತ್ ನಾಯಕ್ ಅವರು ಖರೀದಿ ಮಾಡಿದ್ದರು. ಇದಕ್ಕೆ 60 ಲಕ್ಷ ರೂ. ಇನ್ಪುಟ್ ಟ್ಯಾಕ್ಸ್ ಕಟ್ ಆಗಿತ್ತು. ಇದರಲ್ಲಿ 34 ಲಕ್ಷ ರೂ. ಇನ್ಪುಟ್ ಟ್ಯಾಕ್ಸ್ ಮರು ಕ್ರೆಡಿಟ್ ಆಗಿತ್ತು. ಈ ಇನ್ಪುಟ್ ಟ್ಯಾಕ್ಸ್ ಕಾನೂನು ಬಾಹಿರ, ಸುಳ್ಳು ದಾಖಲೆ ನೀಡಿ ಟ್ಯಾಕ್ಸ್ ಮರುಪಾವತಿ ಮಾಡಿಕೊಂಡಿದ್ದಾರೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದೂರು ದಾಖಲಿಸಿದ್ದರು.

ಈ ಬಗ್ಗೆ ವಿಶ್ವಜೀತ್ ನಾಯಕ್ ಅವರನ್ನು ತೀವ್ರ ವಿಚಾರಣೆ ನಡೆಸಲಾಗಿತ್ತು. ಈವರೆಗೆ ಡಿಸಿ ಭರತ್ ವಿಶ್ವಜೀತ್ ನಾಯಕ್ ಅವರನ್ನು ನಾಲ್ಕು ಬಾರಿ ವಿಚಾರಣೆಗೆ ಕರೆದಿದ್ದರು. ಇಂದು (ಮಾ.30) ಐದನೇ ಬಾರಿಗೆ ವಿಚಾರಣೆಗೆ ಕರೆದಿದ್ದರು. ವಿಚಾರಣೆಗೆ ಬರುವಾಗ 6 ಲಕ್ಷ ರೂ. ಹಣ ತೆಗೆದುಕೊಂಡ ಬನ್ನಿ, ನಿಮ್ಮ ಕೇಸ್ ಕ್ಲೋಸ್ ಮಾಡುವುದಾಗಿ ಹೇಳಿದ್ದರು ಎನ್ನಲಾಗಿದೆ. ಇದರಿಂದ ಮಾನಸಿಕವಾಗಿ ನೊಂದಿದ್ದ ವಿಶ್ವಜೀತ್ ಬೆಂಗಳೂರು ಲೋಕಾಯುಕ್ತ ಕಚೇರಿಯಲ್ಲಿ ದೂರು ನೀಡಿದ್ದರು.

Leave a Reply

Your email address will not be published. Required fields are marked *

error: Content is protected !!