ಉದಯವಾಹಿನಿ, ಶಿವಮೊಗ್ಗ: ಆಹಾರ ಅರಸುತ್ತ ಬಂದ ಕರಡಿಯೊಂದು ಶಿವಮೊಗ್ಗದ ಸೋಗಾನೆಯಲ್ಲಿರುವ ವಿಮಾನ ನಿಲ್ದಾಣದ ಒಳಗೆ ನುಗ್ಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಸೆರೆ ಹಿಡಿದಿದ್ದಾರೆ. ಇಂದು (ಮಾ.30) ಬೆಳಗ್ಗೆ ವಿಮಾನ ನಿಲ್ದಾಣದ ಪಕ್ಕದ ವಿನಾಯಕ ನಗರದಲ್ಲಿ ಕರಡಿ ಕಾಣಿಸಿಕೊಂಡಿತ್ತು. ಅಲ್ಲಿನ ಮನೆಗಳು, ತೋಟಗಳ ಪಕ್ಕದಲ್ಲಿ ಓಡಾಡಿತ್ತು. ಈ ವಿಚಾರ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕರಡಿ ವಿಮಾನ ನಿಲ್ದಾಣದ ಕಾಂಪೌಂಡ್‌ ಜಿಗಿದು ಒಳಗೆ ಹೋಗಿದೆ. ಕರಡಿಯ ಓಡಾಟ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ವಿಮಾನ ನಿಲ್ದಾಣದ ಕಾಂಪೌಂಡ್‌ ಒಳಗೆ ಪೊದೆ ಬೆಳೆದಿದ್ದು, ಸ್ವಲ್ಪ ಸಮಯ ಕರಡಿ ಅವಿತು ಕೊಂಡಿತ್ತು. ಬಳಿಕ ಶೋಧ ನಡೆಸಿದಾಗ ಕರಡಿ ಮತ್ತೆ ಮನೆಗಳ ಕಡೆ ಓಡಿ ಹೋಗಿತ್ತು. ಬಳಿಕ ಜ್ಯೋತಿ ನಗರದ ಶಾಲೆಯ ಬಳಿ ಕುಳಿತಿದ್ದ ಕರಡಿಗೆ ಅರವಳಿಕೆ ನೀಡಿ ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದಾರೆ.

 

 

Leave a Reply

Your email address will not be published. Required fields are marked *

error: Content is protected !!