ಉದಯವಾಹಿನಿ, ಹಾಸನ: ಮನೆಯ ಮುಂದೆ ನಿಲ್ಲಿಸಿದ್ದ ಆಟೋ ಮೇಲೆ ಪುಂಡಾನೆಯೊಂದು ದಾಳಿ ಮಾಡಿ ಜಖಂಗೊಳಿಸಿದ ಘಟನೆ ಬೇಲೂರು ತಾಲೂಕಿನ ಕುಪ್ಪಗೋಡು ಗ್ರಾಮದಲ್ಲಿ ನಡೆದಿದೆ. ಕಾಡಾನೆ ದಾಳಿಯ ವೀಡಿಯೋ ಆಟೋ ಮಾಲೀಕನ ಮೊಬೈಲ್‍ನಲ್ಲಿ ಸೆರೆಯಾಗಿದೆ.
ಗ್ರಾಮದ ಕೃಷ್ಣಪ್ಪ ಅವರಿಗೆ ಸೇರಿದ ಆಟೋ ಮೇಲೆ ಕಾಡಾನೆ ದಾಳಿ ನಡೆಸಿದೆ. ಇಂದು (ಮಾ.30) ಬೆಳಗ್ಗೆ ಮನೆಯ ಬಳಿ ಬಂದ ಒಂಟಿಸಲಗ ನಿಂತಿದ್ದ ಆಟೋ ಮೇಲೆ ಏಕಾಏಕಿ ದಾಳಿ ಮಾಡಿದೆ. ದಾಳಿಯಿಂದ ಆಟೋ ಜಖಂಗೊಂಡಿದೆ. ದಾಳಿ ಬಳಿಕ ಕಾಫಿ ತೋಟದೊಳಗೆ ಕಾಡಾನೆ ಓಡಿಹೋಗಿದೆ. ಕಳೆದ ಒಂದು ವಾರದಿಂದ ಕುಪ್ಪಗೋಡು ಗ್ರಾಮದಲ್ಲಿ ಕಾಡಾನೆಗಳ ಹಿಂಡು ಉಳಿದುಕೊಂಡಿವೆ. ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!