ಉದಯವಾಹಿನಿ, ಬೆಂಗಳೂರು: ಗ್ಯಾಸ್ ಸಮಸ್ಯೆಗೆ ಪ್ರಧಾನಿ ಮೋದಿ ಮತ್ತು ಕೇಂದ್ರ ಪೆಟ್ರೋಲಿಯಂ ಸಚಿವರು ಉತ್ತರ ಕೊಡಬೇಕು. ಶೀಘ್ರವೇ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಹೋಟೆಲ್‌ಗಳಲ್ಲಿ ಸಿಲಿಂಡರ್ ಸಮಸ್ಯೆ ಆಗ್ತಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಿನ್ನೆ ಹೆಚ್ಚುವರಿ ಸಿಲಿಂಡರ್‌ಗೆ ಕೇಂದ್ರ ಸರ್ಕಾರ ಆದೇಶ ಮಾಡಿದೆ. ಸಿಲಿಂಡರ್ ಇವತ್ತು ಡಿಸ್ಟ್ರಿಬ್ಯೂಟರ್‌ಗೆ ಹೋಗುತ್ತದೆ. ನಾಳೆ ಎಲ್ಲರಿಗೂ ಸಿಗಲಿದೆ. ನಾವು ಹೇಳಿದಂತೆ 17,500 ಸಿಲಿಂಡರ್ ಹೋಟೆಲ್ ಅವರಿಗೆ ಸಿಗುತ್ತದೆ. ಹೋಟೆಲ್ ಅವರಿಗೆ ನಾಳೆ ಡೆಲಿವರಿ ಆಗುತ್ತದೆ. ಯಾರು ಭಯ ಬೀಳೋ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಮನವಿ ಮಾಡ್ತೀನಿ. ಸಿಲಿಂಡರ್ ಸಮಸ್ಯೆ ಬಗ್ಗೆ ಕೇಂದ್ರ ಅಡ್ರೆಸ್ ಮಾಡಬೇಕು. ಕೇಂದ್ರ ಸರ್ಕಾರ ಹಿಂದೆ ಗ್ಯಾಸ್ ಕೊಡ್ತೀವಿ. ಎಷ್ಟು ಬೇಕಾದ್ರು ಕರ್ಮಷಿಯಲ್ ಗ್ಯಾಸ್ ಉಪಯೋಗ ಮಾಡಿಕೊಳ್ಳಿ ಅಂದಿದ್ದರು. ಈಗ ದಿಢೀರ್ ಅಂತ ನಿಲ್ಲಿಸಿರೋದು ಸಮಸ್ಯೆ ಆಗಿದೆ. ಈಗ ಕೇಂದ್ರವೇ ಸಮಸ್ಯೆ ಬಗ್ಗೆ ಮಾತಾಡಬೇಕು. ಮೋದಿ ಮತ್ತು ಪೆಟ್ರೋಲಿಯಂ ಸಚಿವರು ಮಾತಾಡಬೇಕು. ಪರ್ಯಾಯ ವ್ಯವಸ್ಥೆ ಮಾಡಬೇಕು. ಗ್ಯಾಸ್ ಸಮಸ್ಯೆ ಆಗಿದೆ. ಜನರು ಆಹಾಕಾರಗೊಂಡಿದ್ದಾರೆ. ಇದಕ್ಕೆ ಪರಿಹಾರ ಕೊಡಬೇಕಾಗಿರೋದು ಕೇಂದ್ರ, ಅವರು ಮಾತಾಡಬೇಕು ಎಂದು ಒತ್ತಾಯಿಸಿದ್ದಾರೆ.
ಡೊಮೆಸ್ಟಿಕ್ ಸಿಲಿಂಡರ್‌ಗೂ ಸಮಸ್ಯೆ ಆಗಿರೋ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಗರ ಪ್ರದೇಶಗಳಲ್ಲಿ 25 ದಿನ ಆದ ಮೇಲೆ ಹಾಗೂ ಗ್ರಾಮೀಣ ಭಾಗದಲ್ಲಿ 45 ದಿನಕ್ಕೆ ಕೊಡಬೇಕು ಅಂತ ಹೇಳಿದ್ದೇವೆ. ಅದರಂತೆ ಏಜೆನ್ಸಿಗಳು ನಡೆದುಕೊಳ್ಳಬೇಕು. ಏಜೆನ್ಸಿ ಅವರು ಬುಕ್ ಮಾಡಿಕೊಳ್ಳದೇ ಹೋದ್ರೆ ಆಯಾ ಕಂಪನಿಗಳಿಗೆ ಗ್ರಾಹಕರು ದೂರು ಕೊಡಲಿ ಎಂದು ತಿಳಿಸಿದ್ದಾರೆ.
