ಉದಯವಾಹಿನಿ,  ಧುರಂಧರ್ 2 ಪಾಕಿಸ್ತಾನದಲ್ಲಿ ಬಿಡುಗಡೆಯಾಗದೇ ಇದ್ದರೂ ಅಲ್ಲಿ ಭಾರೀ ಜನಪ್ರಿಯತೆ ಗಳಿಸಿದೆ. ಬಾಕ್ಸ್‌ ಆಫೀಸ್‌ನಲ್ಲಿ 1 ಸಾವಿರ ಕೋಟಿಗೂ ಅಧಿಕ ಕಲೆಕ್ಷನ್‌ ಮಾಡುತ್ತಿರುವ ಧುರಂಧರ್‌ ಸಿನಿಮಾದ ಆದಾಯದಲ್ಲಿ ಈಗ ತಮಗೆ ಪಾಲು ನೀಡುವಂತೆ ಬೇಡಿಕೆ ಇಟ್ಟು ಟ್ರೋಲ್‌ ಆಗುತ್ತಿದ್ದಾರೆ. ಕರಾಚಿಯಲ್ಲಿರುವ ಲಿಯಾರಿ ಪ್ರದೇಶದಲ್ಲಿ ನಡೆದ ಗ್ಯಾಂಗ್‌ವಾರ್‌, ಸರ್ಕಾರ ಮತ್ತು ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆ ಈ ಕ್ರಿಮಿನಲ್‌ಗಳಿಗೆ ಇರುವ ಸಂಬಂಧವನ್ನು ಆಧಾರಿಸಿ ನಿರ್ದೇಶಕ ಆದಿತ್ಯ ಧರ್ ಸಿನಿಮಾ ತೆಗೆದಿದ್ದಾರೆ.
ಕಾಳಸಂತೆಯಲ್ಲಿ ಈ ಸಿನಿಮವನ್ನು ವೀಕ್ಷಿಸಿದ ಲಿಯಾರಿ ಜನ ಈಗ ಸಿನಿಮಾದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಧುರಂಧರ್‌ ಎರಡೂ ಸಿನಿಮಾಗಳು ಭರ್ಜರಿ ಯಶಸ್ಸು ಕಂಡು ಹಿನ್ನೆಲೆಯಲ್ಲಿ ಬಂದ ಲಾಭದಲ್ಲಿ 500 ಕೋಟಿ ರೂ. ಹಣವನ್ನು ನಮಗೆ ಕೊಡಿ. ಈ ಹಣದಲ್ಲಿ ನಾವು ರಸ್ತೆ ಹಾಗೂ ಮೂಲ ಸೌಕರ್ಯಗಳನ್ನು ನಾವು ಅಭಿವೃದ್ಧಿ ಮಾಡುತ್ತೇವೆ ಎಂದಿದ್ದಾರೆ. ಈ ಭಾಗದ ರಸ್ತೆಗಳು ಚೆನ್ನಾಗಿಲ್ಲ. 1 ಸಾವಿರ ಕೋಟಿ ರೂ.ನಲ್ಲಿ ಅರ್ಧಭಾಗವಾದ 500 ಕೋಟಿ ರೂ. ಹಣವನ್ನು ನಮಗೆ ನೀಡಿದರೆ ಚೆನ್ನಾಗಿರುವ ರಸ್ತೆಗಳನ್ನು ನಿರ್ಮಾಣ ಮಾಡಬಹುದು. ಮಕ್ಕಳು ಅಪಾಯವಿಲ್ಲದೆ ಓಡಾಡಬಹುದು. ದಯವಿಟ್ಟು ನಮಗೆ ಹಣ ಕೊಡಿ ಎಂದು ಕೇಳಿದ್ದಾರೆ.

ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ 6 ಎಕರೆ ಬೃಹತ್ ಜಾಗದಲ್ಲಿ ಲಿಯಾರಿ ಪ್ರದೇಶದ ಸೆಟ್‌ ನಿರ್ಮಾಣ ಮಾಡಲಾಗಿತ್ತು. ನಿರ್ಮಾಣ ವಿನ್ಯಾಸಕ ಸೈನಿ ಎಸ್ ಜೋಹ್ರೇ 20 ದಿನಗಳಲ್ಲಿ ಸೆಟ್‌ ನಿರ್ಮಿಸಿದ್ದರು. ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡುತ್ತಿರುವ ಧುರಂದರ್‌ 11 ದಿನಗಳಲ್ಲಿ 1200 ಕೋಟಿ ರೂ. ಅಧಿಕ ಹಣ ಗಳಿಸಿ ಮುನ್ನುಗ್ಗುತ್ತಿದೆ. ಭಾರತದಲ್ಲೇ 770 ಕೋಟಿ ರೂ. ಗಳಿಸಿರುವ ಸಿನಿಮಾ ಒಟ್ಟು 1226 ಕೋಟಿ ರೂ. ಗಳಿಸಿದೆ

Leave a Reply

Your email address will not be published. Required fields are marked *

error: Content is protected !!