ಉದಯವಾಹಿನಿ,  ನಟಿ ಸೋನಂ ಕಪೂರ್ ಹಾಗೂ ಬ್ಯುಸಿನೆಸ್‌ಮೆನ್ ಆನಂದ್ ಅಹೂಜಾ ಎರಡನೇ ಬಾರಿ ಪೋಷಕರಾಗಿದ್ದಾರೆ. ದಂಪತಿಗೆ ಈಗಾಗಲೇ ವಾಯು ಎಂಬ ಕಂದನಿದ್ದು, ಅವನಿಗೆ ತಮ್ಮ ಬಂದಿದ್ದಾನೆ ಎಂದು ಅನೌನ್ಸ್ ಮಾಡಿದ್ದಾರೆ. ನಿನ್ನೆ ಮಗು ಜನಿಸಿದ್ದು, ಇನ್ಸಾ ಗ್ರಾಮ್‌ನಲ್ಲಿ ಕಪಲ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ನಮ್ಮ ಕುಟುಂಬ ಹಿರಿದಾಗಿದೆ. ಅವನ ಆಗಮನದಿಂದ ನಮ್ಮ ಹೃದಯದಲ್ಲಿ ಸಂತಸ ಹೆಚ್ಚಿದೆ. ವಾಯು ತನ್ನ ಚಿಕ್ಕ ಸಹೋದರನನ್ನು ಸ್ವಾಗತಿಸಲು ಖುಷಿಯಾಗಿದ್ದಾನೆ.
ನಮ್ಮ ಮನೆಯ ಸಂತೋಷ ಹೆಚ್ಚಿದೆ. ಈಗ ಕುಟುಂಬ ನಾಲ್ಕು ಜನರಿಗೆ ಬಡ್ತಿ ಪಡೆದಿದೆ. ಹೊಸ ಅಧ್ಯಾಯವನ್ನು ಪ್ರಾರಂಭಿಸಲು ನಾವು ಕೃತಜ್ಞರಾಗಿರುತ್ತೇವೆ. ಪ್ರೀತಿಯಿಂದ, ಸೋನಮ್, ಆನಂದ್ ಮತ್ತು ವಾಯು ಎಂದು ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!