ಉದಯವಾಹಿನಿ, ಸೂರತ್, ಗುಜರಾತ್: ಸೂರತ್‌ನ ಲಿಂಬಾಯತ್ ಪ್ರದೇಶದ ಮಿಥಿ ಖಾದಿ ಬಳಿಯ ವಸತಿ ಸೊಸೈಟಿಯಲ್ಲಿ ಸಂಭವಿಸಿದ ಅಗ್ನಿಅವಘಡದಲ್ಲಿ ಒಂದೇ ಕುಟುಂಬದ ಐವರು ಸದಸ್ಯರು ಸಾವನ್ನಪ್ಪಿದ್ದಾರೆ. ದುರಂತದ ಸಮಯದಲ್ಲಿ ಹೊಗೆಯಿಂದಾಗಿ ಉಸಿರುಗಟ್ಟಿ ಹಾಗೂ ಸುಟ್ಟಗಾಯಗಳಿಂದಾಗಿ ಮನೆಯಲ್ಲಿದ್ದ ಐದು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯು ಇಡೀ ಪ್ರದೇಶದಲ್ಲಿ ಭೀತಿಯನ್ನು ಸೃಷ್ಟಿಸಿದೆ.

ಘಟನೆಯ ಸುದ್ದಿ ತಿಳಿದ ಕೂಡಲೇ, ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಬಂದು ಅಗ್ನಿ ನಿಯಂತ್ರಣ ಮಾಡುವಲ್ಲಿ ಸಫಲವಾಗಿವೆ. ಆದರೆ, ಆಗಲೇ ಐವರು ದುರಂತದಲ್ಲಿ ಅಸುನೀಗಿದ್ದರು. ಪ್ರಾಥಮಿಕ ತನಿಖೆಯ ಪ್ರಕಾರ ಬೆಂಕಿ ಹೊತ್ತಿಕೊಂಡಾಗ ಮನೆಯೊಳಗೆ ಹೆಚ್ಚಿನ ಪ್ರಮಾಣದ ಸೀರೆಗಳನ್ನು ಸಂಗ್ರಹಿಸಲಾಗಿತ್ತು ಎಂದು ತಿಳಿದು ಬಂದಿದೆ. ಇದರಿಂದಾಗಿ ಬೆಂಕಿಯು ಮನೆಯ ತುಂಬೆಲ್ಲ ವೇಗವಾಗಿ ಹರಡಿಕೊಂಡಿದೆ ಎನ್ನಲಾಗಿದೆ. ಇದರ ಪರಿಣಾಮವಾಗಿ ಐದು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಮನೆಗೆ ಹೋಗುವ ಕಿರಿದಾದ ದಾರಿಯಿಂದಾಗಿ ಹಾಗೂ ಒಳಗೆ ಸಂಗ್ರಹಿಸಲಾದ ಬೃಹತ್ ಪ್ರಮಾಣದ ಬಟ್ಟೆಗಳಿಂದಾಗಿ ಬೆಂಕಿಯನ್ನು ನಿಯಂತ್ರಿಸುವುದು ಕಷ್ಟ ಸಾಧ್ಯವಾಗಿದೆ. ಕಠಿಣ ಪ್ರಯತ್ನದ ನಂತರ ಅಗ್ನಿಶಾಮಕ ದಳದ ತಂಡವು ಅಂತಿಮವಾಗಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಆದರೆ ಮನೆಯ ಒಳಗಡೆ ಇದ್ದವರನ್ನು ಬದುಕಿಸಲು ಸಾಧ್ಯವಾಗಿಲ್ಲ.

Leave a Reply

Your email address will not be published. Required fields are marked *

error: Content is protected !!