ಉದಯವಾಹಿನಿ, ರಷ್ಯಾ: ರಷ್ಯಾದ ಆಂಟೊನೊವ್ -26 ಮಿಲಿಟರಿ ವಿಮಾನವು ಅಪಘಾತಕ್ಕೆ ಒಳಗಾಗಿದ್ದು, 29 ಜನರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ TASS ಸುದ್ದಿ ಸಂಸ್ಥೆ ಬುಧವಾರ ವರದಿ ಮಾಡಿದೆ.
ಮಾರ್ಚ್ 31 ರಂದು ಮಾಸ್ಕೋ ಕಾಲಮಾನ ಅನುಸಾರ ಸಂಜೆ 6ಕ್ಕೆ ಹಾರಾಟ ನಡೆಸುತ್ತಿದ್ದ ವಿಮಾನವು, ಕ್ರಿಮಿಯನ್ ಪರ್ಯಾಯ ದ್ವೀಪದ ಮೇಲೆ ನಿಗದಿತ ವ್ಯಾಪ್ತಿಯೊಳಗೆ ಹಾರಾಡುವಾಗ ವಿಮಾನ ಸಂಪರ್ಕ ಕಡಿತಗೊಂಡಿತು. ಪತನಗೊಂಡ ವಿಮಾನದ ಸ್ಥಳವನ್ನು ರಕ್ಷಣಾ ತಂಡ ಪತ್ತೆ ಹಚ್ಚಿದೆ.
ವರದಿಗಳ ಪ್ರಕಾರ, ವಿಮಾನದಲ್ಲಿದ್ದ ಆರು ಸಿಬ್ಬಂದಿ ಮತ್ತು ಮಂದಿ 23 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ವಿಮಾನವು ತಾಂತ್ರಿಕ ವೈಫಲ್ಯದಿಂದ ಅಪಘಾತಕ್ಕೀಡಾಗಿದ್ದು, ವಿಮಾನದ ಅವಶೇಷಗಳ ಮೇಲೆ ಯಾವುದೇ ಬಾಹ್ಯ ಪ್ರಭಾವದ ಲಕ್ಷಣಗಳು ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.
