ಉದಯವಾಹಿನಿ,  ಮಧ್ಯಮ ಕ್ರಮಾಂಕದಲ್ಲಿ ದಿಢೀರ್‌ ವಿಕೆಟ್‌ ಕಳೆದುಕೊಂಡರೂ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಕೂಪರ್‌ ಕೊನೋಲಿ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಗುಜರಾತ್‌ ಟೈಟಾನ್ಸ್‌ ವಿರುದ್ಧ ಪಂಜಾಬ್‌ ಕಿಂಗ್ಸ್‌) ರೋಚಕ 3 ವಿಕೆಟ್‌ಗಳ ಜಯ ಸಾಧಿಸಿದೆ.
ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಗುಜರಾತ್‌ 6 ವಿಕೆಟ್‌ ನಷ್ಟಕ್ಕೆ 162 ರನ್‌ ಹೊಡೆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್‌ ಇನ್ನು 5 ಎಸೆತ ಬಾಕಿ ಇರುವಂತೆಯೇ 165 ರನ್‌ ಹೊಡೆದು ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಪ್ರಸಿದ್ಧ್‌ ಕೃಷ್ಣ ಮ್ಯಾಜಿಕ್‌: 12 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 110 ರನ್‌ ಗಳಿಸಿದ್ದಾಗ ಪಂಜಾಬ್‌ ಸುಲಭವಾಗಿ ಜಯ ಸಾಧಿಸಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಪ್ರಸಿದ್ಧ್‌ ಕೃಷ್ಣ ಕೈಗೆ ಬಾಲ್‌ ಸಿಕ್ಕಿದ ಕೂಡಲೇ ಮ್ಯಾಜಿಕ್‌ ಮಾಡಲು ಆರಂಭಿಸಿದರು. 18 ರನ್‌ಗಳಿಸಿ ಉತ್ತಮವಾಗಿ ಆಡುತ್ತಿದ್ದ ಶ್ರೇಯಸ್‌ ಅಯ್ಯರ್‌ ಪ್ರಸಿದ್ಧ್‌ ಬೌಲಿಂಗ್‌ನಲ್ಲಿ ಕ್ಯಾಚ್‌ ನೀಡಿ ಔಟಾದರು. ನಂತರ ವಾಷಿಂಗ್ಟನ್‌ ಸುಂದರ್‌ ನೆಹಲ್‌ ವಡೇರಾ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು.

Leave a Reply

Your email address will not be published. Required fields are marked *

error: Content is protected !!