ಉದಯವಾಹಿನಿ, ಉಡುಪಿ: ಗ್ಯಾಸ್‌ ಅಭಾವದ ಲಾಭ ಪಡೆದ ಸೈಬರ್‌ ವಂಚಕರು ಉಡುಪಿಯಲ್ಲಿ ಇಬ್ಬರಿಗೆ ಲಕ್ಷ ಲಕ್ಷ ರೂ. ಹಣ ವಂಚಿಸಿರುವ ಪ್ರಕರಣ ನಡೆದಿದೆ. ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.

ಸೈಬರ್ ಕ್ರಿಮಿನಲ್‌ಗಳು ಗ್ಯಾಸ್ ಸಿಲಿಂಡರ್‌ಗಾಗಿ ಕೆವೈಸಿ ಅಪ್ಡೇಟ್ ಮಾಡಿ ಎಂದು ಏಜೆನ್ಸಿ ಹೆಸರಲ್ಲಿ ಅಪರಿಚಿತ ನಂಬರ್‌ನಿಂದ ಕರೆ ಮಾಡುತ್ತಾರೆ. ಬಳಿಕ ವಾಟ್ಸಪ್‌ಗೆ ಎಪಿಕೆ ಫೈಲ್ ಕಳಿಸುತ್ತಾರೆ. ಫೈಲ್ ಡೌನ್ಲೋಡ್ ಮಾಡಿದರೆ ಫೋನ್‌ ಹ್ಯಾಕ್‌ ಆಗಲಿದೆ. ಇದರಿಂದ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಪಡೆದು ವಂಚನೆ ಮಾಡುತ್ತಾರೆ. ಇದೇ ರೀತಿಯ ಎರಡು ಪ್ರಕರಣ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಒಂದು ಪ್ರಕರಣದಲ್ಲಿ 1.5 ಲಕ್ಷ ರೂ. ವಂಚನೆಯಾಗಿದೆ. ಇನ್ನೊಂದು ಪ್ರಕರಣದಲ್ಲಿ 6 ಲಕ್ಷ ರೂ. ಗೂ ಹೆಚ್ಚು ಹಣ ವಂಚನೆಯಾಗಿದೆ. ಬ್ಯಾಂಕ್ ಖಾತೆಯಿಂದ ಹಣ ಹೋಗಿದೆ. ಬೇಗ ಸಿಲಿಂಡರ್ ಕೊಡುತ್ತೇವೆ, ಹಳೆಯ ರೇಟಿನಲ್ಲಿ ಸಿಲಿಂಡರ್ ಕೊಡ್ತೇವೆ ಎಂದು ಫೇಕ್ ವೆಬ್‌ಸೈಟ್ ಮೂಲಕ ವಂಚಿಸುತ್ತಾರೆ. ಕೆವೈಸಿ ಬಗ್ಗೆ ಯಾವುದೇ ತರಾತುರಿ ಬೇಡ. ಸರ್ಕಾರ ಹೊಸ ಆದೇಶ ಮಾಡಿಲ್ಲ. ಈ ಹಿಂದೆ ಮಾಡಿರುವ ಆದೇಶ ಜಾರಿಯಲ್ಲಿದೆ. ಎಪಿಕೆ ಫೈಲ್‌ಗಳು ಅಪಾಯಕಾರಿ ಎಂದು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!