ಉದಯವಾಹಿನಿ, ಬಾಲಿವುಡ್ ಗಾಯಕ ಬಾದ್‌ಶಾಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು ಗಾಯಕ ಹನಿ ಸಿಂಗ್ ಜೊತೆಗೂಡಿ ರಚಿಸಿದ ವಾಲ್ಯೂಮ್ 1 ಹಾಡನ್ನು ಎಲ್ಲಾ ಸಾಮಾಜಿಕ ಜಾಲತಾಣಗಳಿಂದ ತೆಗೆದು ಹಾಕುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.
ಈ ಹಾಡಿನಲ್ಲಿ ಮಹಿಳೆಯರನ್ನು ಅವಹೇಳನಕಾರಿಯಾಗಿ ಚಿತ್ರಿಸಿದೆ ಎಂದು ಕೋರ್ಟ್ ಟೀಕಿಸಿದ್ದು, ಜೊತೆಗೆ ಹಾಡಿನ ಸಾಹಿತ್ಯವು ಆಕ್ಷೇಪಾರ್ಹವಾಗಿದ್ದು, ಮಹಿಳೆಯರನ್ನು ಅಪಹಾಸ್ಯ ಮಾಡುವಂತಿದೆ ಎಂದು ಹೇಳಿದೆ.
ಇಂತಹ ಹಾಡು ಸಮಾಜಕ್ಕೆ ಮಾರಕವಾಗಿದ್ದು, ಕೂಡಲೇ ತೆಗೆದುಹಾಕುವಂತೆ ಹನಿ ಸಿಂಗ್‌ ಸೇರಿದಂತೆ ಸಂಬಂಧಪಟ್ಟವರಿಗೆ ಸೂಚಿಸಿದೆ.
ಹನಿ ಸಿಂಗ್‌ ಮತ್ತು ಬಾದ್‌ಶಾ ಅವರು 2006-07ರಲ್ಲಿ ಜೊತೆಯಾಗಿ ‘ವಾಲ್ಯೂಮ್ 1’ ಹಾಡನ್ನು ಸಿದ್ಧಪಡಿಸಿದ್ದರು.

Leave a Reply

Your email address will not be published. Required fields are marked *

error: Content is protected !!