ಉದಯವಾಹಿನಿ, 2026ರ ಐಪಿಎಲ್ ವಿಶ್ವಕಪ್ ಟೂರ್ನಿ ಬಳಿಕ ಕ್ರಿಕೆಟ್ ವಿಚಾರದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಅರುಣ್ ಧುಮಾಲ್, ಬಾಂಗ್ಲಾದೇಶದ ಆಟಗಾರರಿಗೆ ಮತ್ತೆ ಐಪಿಎಲ್ ಆಡುವ ಅವಕಾಶ ನೀಡುವುದಾಗಿ ಸುಳಿವು ಕೊಟ್ಟಿದ್ದಾರೆ.
ಹೌದು. 2026 ಐಪಿಎಲ್‌ಗೂ ಮುನ್ನ ಮುಸ್ತಾಫಿಜುರ್ ರೆಹಮಾನ್ ಎದುರಿಸಿದ ಸಮಸ್ಯೆಯನ್ನ ಬಾಂಗ್ಲಾದೇಶಿ ಆಟಗಾರರು ಎದಿರಿಸುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಮುಸ್ತಾಫಿಜುರ್ ರೆಹಮಾನ್ ಐಪಿಎಲ್‌ನಿಂದ ಹೊರಗುಳಿದಿದ್ದು ದುರದೃಷ್ಟಕರ, ಭವಿಷ್ಯದಲ್ಲಿ ಈ ಘಟನೆ ಪುನರಾವರ್ತನೆಯಾಗುವುದಿಲ್ಲ ಎಂದು ಖಚಿತವಾಗಿ ಹೇಳಿದ್ದಾರೆ. ಸರ್ಕಾರದ ಪಾತ್ರ ಇಲ್ಲ
ಸಂದರ್ಶನವೊಂದರಲ್ಲಿ ಮಾತನಾಡಿದ ಧುಮಾಲ್ ಕೆಲವೊಂದು ಘಟನೆಗಳು ದುರಾದೃಷ್ಟಕರ ಎನಿಸುತ್ತವೆ. ಕೇಂದ್ರ ಸರ್ಕಾರ ಕ್ರಿಕೆಟ್ ವಿಷಯದಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಅಥವಾ ಯಾವುದೇ ಪಾತ್ರವನ್ನೂ ವಹಿಸಲ್ಲ. ಕ್ರಿಕೆಟ್‌ಗೆ ಹೆಚ್ಚಿನ ಬೆಂಬಲ ನೀಡುತ್ತಲೇ ಬಂದಿದೆ. ಆದ್ರೆ ಕೆಲವೊಮ್ಮೆ ನಮ್ಮ ಸುತ್ತಲೂ ನಡೆಯುವ ಘಟನೆಗಳಿಂದ ಹೊಸ ನಿರ್ಧಾರಗಳು ಬರುತ್ತವೆ. ಒಳ್ಳೆಯ ಹಿತಾಸಕ್ತಿಗಳು ಮೇಲುಗೈ ಸಾಧಿಸುತ್ತವೆ. ಆದ್ರೆ 2026 ರ ಐಪಿಎಲ್‌ಗೂ ಸಂಭವಿಸಿದ ಘಟನೆ ಪುನರಾವರ್ತನೆಯಾಗುವುದಿಲ್ಲ ಅನ್ನೋದು ನನಗೆ ಖಚಿತವಾಗಿದೆ ಎಂದು ಹೇಳಿದ್ದಾರೆ.
