ಉದಯವಾಹಿನಿ, ಮುಂಬೈ: ನಾನು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮುಖ್ಯಸ್ಥನಾಗಿದ್ದರೆ ಲಕ್ನೋ ಸೂಪರ್‌ ಜೈಂಟ್ಸ್‌ ಮಾಲೀಕ ಸಂಜೀವ್ ಗೋಯೆಂಕಾ‌ ಅವರನ್ನು ನಿಷೇಧಿಸುತ್ತಿದ್ದೆ ಎಂದು ಐಪಿಎಲ್‌ ಸ್ಥಾಪಕ ಮತ್ತು ಮೊದಲ ಅಧ್ಯಕ್ಷ ಲಲಿತ್‌ ಮೋದಿ ಹೇಳಿದ್ದಾರೆ.
ಡೆಲ್ಲಿ ವಿರುದ್ಧ ಪಂದ್ಯ ಸೋತ ಬಳಿಕ ಮೈದಾನದಲ್ಲಿ ನಾಯಕ ರಿಷಭ್‌ ಪಂತ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಕ್ಕೆ ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ ಮಾಡಿ ಆಕ್ರೋಶ ಹೊರಹಾಕುತ್ತಿದ್ದಾರೆ. ಫುಟ್ಬಾಲ್ ಲೀಗ್‌ಗಳ ಮಾಲೀಕರು ಆಟಗಾರರನ್ನು ಗೌರವದಿಂದ ನಡೆಸಿಕೊಳ್ಳುತ್ತಾರೆ. ಆದರೆ ಐಪಿಎಲ್ ಮಾಲೀಕರು ಕೇವಲ ಪ್ರಚಾರಕ್ಕಾಗಿ ಆಟಗಾರರನ್ನು ಸಾರ್ವಜನಿಕವಾಗಿ ಹೀಯಾಳಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಸಂಜೀವ್ ಗೋಯೆಂಕಾ ಅವರು ಐಪಿಎಲ್‌ನ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ. ಈ ವರ್ತನೆಯು ಫ್ರಾಂಚೈಸಿ ಒಪ್ಪಂದದ ನಿಯಮಗಳ ಉಲ್ಲಂಘನೆಯಾಗಿದೆ. ಒಂದು ವೇಳೆ ನಾನು ಈಗಲೂ ಐಪಿಎಲ್ ಕಮಿಷನರ್ ಆಗಿದ್ದರೆ ಅವರನ್ನು ತಕ್ಷಣವೇ ಐಪಿಎಲ್‌ನಿಂದ ನಿಷೇಧಿಸುತ್ತಿದ್ದೆ ಮತ್ತು ಅವರ ತಂಡದ ಮಾಲೀಕತ್ವವನ್ನೇ ರದ್ದುಪಡಿಸುತ್ತಿದ್ದೆ ಎಂದು ಸಿಟ್ಟು ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!