
ಉದಯವಾಹಿನಿ,ಚಿಂಚೋಳಿ: ಕಂಚನಾಳ ಗ್ರಾಮದಲ್ಲಿ ಮಳೆಗಾಲ ಆರಂಭವಾದರೆ ಗ್ರಾಮದಲ್ಲಿ ಸಂಪೂರ್ಣ ಜಲಾವೃತವಾಗುತ್ತಿತ್ತು ಸಮಸ್ಯೆ ಗಮನಕ್ಕೆ ಬಂದನಂತರ ಗ್ರಾಮಕ್ಕೆ ನೀರು ಬರದಹಾಗೆ ಬ್ರೀಡ್ಜ್ ನಿರ್ಮಿಸಿ ಶಾಶ್ವತ ಪರಿಹಾರ ಮಾಡಲಾಗಿದೆ ಎಂದು ಸೇವಾನಿವೃತ್ತಿ ಹೊಂದುತ್ತಿರುವ ಎಂಐ ಎಇಇ ಶಿವಶರಣಪ್ಪಾ ಕೇಶ್ವಾರ ಹೇಳಿದರು.
ಪಟ್ಟಣದ ಸಹಾಯಕ ಕಾರ್ಯಪಾಲಕ ಅಭಿಯಂತರ ಸಣ್ಣನೀರಾವರಿ ಮತ್ತು ಅಂತರ್ಜಾಲ ಅಭಿವೃದ್ಧಿ ಉಪ-ವಿಭಾಗ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಸೇವಾನಿವೃತ್ತಿ ಕಾರ್ಯಕ್ರಮದ ಬೀಳ್ಕೋಡುವ ಸಮಾರಂಭದಲ್ಲಿ ಮಾತನಾಡಿದ ಅವರು,ನನ್ನ ಸರ್ಕಾರಿ ಸೇವಾ ಅವಧಿಯಲ್ಲಿ ಯಾವುದೆ ಕಪ್ಪುಚುಕ್ಕೆ ಇಲ್ಲದೆ ರೈತರ,ಜನಸಾಮಾನ್ಯರ ಅನುಕೂಲ ತಕ್ಕಂತೆ ಕೆಲಸ ಮಾಡಿದ್ದೇನೆ.
ಸೋಮನಿಂಗದಳ್ಳಿ ಹಾಗೂ ಹೊಸ ಬಡಾವಣೆಗೆ ಹೋಗಲು ನೂತನ ಬ್ರೀಡ್ಜ್ ಕಂ ಬ್ಯಾರೇಜ್ ನಿರ್ಮಾಣ ಹಂತದಲ್ಲಿದ್ದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ,ತಾಲ್ಲೂಕಾಡಳಿತ,ಕು ಟುಂಬಸ್ಥರು,ರೈತರು,ಜನಸಾಮಾನ್ಯರು ನನ್ನ ಸೇವಾ ಅವಧಿಯಲ್ಲಿ ಎಲ್ಲೋರು ಬೆಂಬಲ ನೀಡಿದ್ದು ಹಾಗಾಗಿ ಸರ್ಕಾರಿ ಹುದ್ದೆಯಲ್ಲಿ ಉತ್ತಮ ಕೆಲಸ ಮಾಡಲು ಅನುಕೂಲವಾಯಿತು ಎಂದು ಹೇಳಿದರು.
ತಹಸೀಲ್ದಾರ್ ವೀರೇಶ ಮುಳಗುಂದಮಠ ಮಾತನಾಡಿ ನೀರಾವರಿ ಇಲಾಖೆಯಲ್ಲಿ ಅಧಿಕಾರಿಗಳಿಗೆ ಸಾಕಷ್ಟು ಕಷ್ಟುಗಳು ಒತ್ತಡಗಳು ಬರುವುದು ಸಹಜ ಆದರೆ ಜನರ ರೈತರ ಸಮಸ್ಯೆಗಳು ಪರಿಹರಿಸಲು ಜನರ ರೈತರ ಜೋತೆ ಕೊಂಡಿಯಂತೆ ಸ್ನೇಹ ಬೆಳೆಸಿ ಅವರ ಸಮಸ್ಯೆ ಬಗೆಹರಿಸುವುದು ಬಹಳಷ್ಟು ದೊಡ್ಡ ಕೆಲಸವಾಗಿದೆ,ಆದರೆ ಕೇಶ್ವಾರರವರ ಸೇವಾ ಅವಧಿಯಲ್ಲಿ ಒಂದು ಕಪ್ಪುಚುಕ್ಕೆ ಇಲ್ಲದೆ ನಿವೃತ್ತಿ ಹೊಂದುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. ತಾಪಂ.ಇಓ ಶಂಕರ ರಾಠೋಡ್,ಗ್ರೇಡ್2 ತಹಸೀಲ್ದಾರ್ ವೆಂಕಟೇಶ ದುಗ್ಗನ್,ನಿವೃತ್ತ ನ್ಯಾಯಾಧೀಶ ಜೆಕೆ ಗೋಖಲೆ ಮಾತನಾಡಿದ್ದರು.
ಈ ಸಂದರ್ಭದಲ್ಲಿ ಕೆ.ಎಂ.ಬಾರಿ,ಮಸೂದ್ ಸೌದಾಗಾರ,ಅಬ್ದುಲ್ ಬಾಷೀದ್,ಎಂಐ ಪ್ರಭಾರಿ ಎಇಇ ರಾಜಶೇಖರ ಅಲಗೂಡ,ಕಳಸ್ಕರ,ಸುನೀಲ,ಗಿರಿರಾಜ ಸಜ್ಜನ,ಅನೇಕರಿದ್ದರು. ನೀರಾವರಿ ಇಲಾಖೆಯಲ್ಲಿ ಶಿವಶರಣಪ್ಪಾ ಕೇಶ್ವಾರರವರು ಜನರಿಗೆ ಕುಡಿಯುವ ನೀರು,ರೈತರಿಗೆ ಬ್ರೀಡ್ಜ್ ಕಂ ಬ್ಯಾರೇಜ್,ರೈತರ ಹೊಲಗಳಿಗೆ ನೀರು ಸಾಗುವಂತೆ ಮಾಡಿ ಜನರ ಮಧ್ಯೆ ಇದ್ದುಕೊಂಡು ಉತ್ತಮ ಕೆಲಸ ನಿರ್ವಹಿಸಿ ಅವರ ಅವಧಿಯಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಸೇವಾನಿವೃತ್ತಿ ಹೊಂದುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಒಂದನೇ ಹಂತ ಕೆಲಸ ಮುಗಿದಿದ್ದು ಎರಡನೆ ಹಂತದಲ್ಲಿ ಕುಟುಂಬದ ಜೋತೆಯಿದ್ದು ಸಮಾಜ ಸೇವೆ ಮಾಡಬೇಕು. :- ಶಂಕರ ರಾಠೋಡ್ ತಾಪಂ.ಇಓ ಚಿಂಚೋಳಿ.
