ಉದಯವಾಹಿನಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ( ಇನ್‌ಸೈಡರ್ ಶೋನಲ್ಲಿ ಮಗದೊಮ್ಮೆ ಮಿಸ್ಟರ್ ನಾಗ್ಸ್ ಮರ್ಮಭರಿತ ಮಾತುಗಳೊಂದಿಗೆ ಪ್ರತ್ಯಕ್ಷವಾಗಿದ್ದಾರೆ. ಇಷ್ಟು ದಿನ ಅವರಿವರ ಕಾಲೆಳೆಯುತ್ತಿದ್ದ ಮಿಸ್ಟರ್ ನಾಗ್ಸ್ ಖ್ಯಾತಿಯ ಡ್ಯಾನಿಶ್ ಸೇಠ್ ಈಗ, ಕಿಂಗ್ ಕೊಹ್ಲಿಯನ್ನ ಟ್ರೋಲಿಗೆಳೆದಿದ್ದಾರೆ. ಈ ವಿಡಿಯೋವನ್ನ ಆರ್‌ಸಿಬಿ ತನ್ನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದು, ಕೆಲವೇ ಗಂಟೆಯಲ್ಲಿ ಲಕ್ಷಾಂತರ ಅಭಿಮಾನಿಗಳು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಷ್ಟಕ್ಕೂ ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವಿಷಯ ಏನಂದ್ರೆ, ಲಂಡನ್ ನಲ್ಲಿ ಮನೆ ಮಾಡಿರುವ ವಿರಾಟ್ ಕೊಹ್ಲಿ ಅವರ ಕುಟುಂಬ ಅಲ್ಲೇ ನೆಲೆಸುತ್ತಿದೆ. ವಿರಾಟ್ ಕೊಹ್ಲಿ ಅವರು ಪ್ರಸ್ತುತ ಕ್ರಿಕೆಟ್ ಪಂದ್ಯಗಳನ್ನು ಆಡುವ ಸಲುವಾಗಿ ಮಾತ್ರ ಭಾರತಕ್ಕೆ ಬರುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದಕ್ಕೆ ವಿರಾಟ್ ಕೊಹ್ಲಿ ಕೂಡ ಸ್ಪಷ್ಟನೆ ಕೊಟ್ಟಿದ್ದರು. ಈ ವಿಷಯವನ್ನ ನೇರವಾಗಿ ಪ್ರಸ್ತಾಪಿಸದ ನಾಗ್ಸ್ ಚೆನ್ನಾಗಿಯೇ ಕೊಹ್ಲಿ ಅವರ ಕಾಲೆಳೆದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ನಿಮ್ಮ ಕುರಿತು ಅನೇಕ ಸಂಗತಿಗಳು ಚರ್ಚೆಯಾಗುತ್ತಿವೆ.. ʻಈ ಎಪಿಸೋಡ್‌ನಲ್ಲಿ ಆರ್‌ಸಿಬಿ ಐವರು ವಿದೇಶಿ ಆಟಗಾರರೊಂದಿಗೆ ಆಡುತ್ತಿದೆʼ ಅನ್ನೋದು ಚರ್ಚೆಯಾಗ್ತಿದೆ, ನನಗೇಕೋ ಇದು ಅರ್ಥವಾಗ್ತಿಲ್ಲ ಅಂತ ಪ್ರಶ್ನೆ ಮಾಡ್ತಾರೆ. ಒಂದು ಕ್ಷಣ ಸ್ಟನ್ ಆದ ಕೊಹ್ಲಿ, ಮುಗುಳು ನಕ್ಕು ಉತ್ತರಿಸುತ್ತಾರೆ. ಅರ್ಥ ಆಗ್ತಿಲ್ಲ ಈ ಪ್ರಶ್ನೆ ನನಗೆ ಯಾಕೆ ಕೇಳ್ತಿದ್ದೀರಿ ಅಂತ.. ವಿದೇಶಿ ಆಟಗಾರರನ್ನ ಕೇಳಿ, ನನ್ನನ್ನ ಯಾಕೆ ಕೇಳ್ತಿದ್ದೀರಿ…? ಅಂತ ಪ್ರಶ್ನೆ ಮಾಡ್ತಾರೆ. ಅಷ್ಟರಲ್ಲಿ ನಾಗ್ಸ್ ಆಕ್ಚುಲಿ ಏನಂತ ನನಗೂ ಗೊತ್ತಿಲ್ಲ ಬಿಡಿ ಎನ್ನುವಾಗಲೇ ಕೊಹ್ಲಿ, ನಾನಂತೂ ವಿದೇಶಿ ಆಟಗಾರನಲ್ಲ ಅಂತಾರೆ, ನಿಮಗನ್ನಿಸುತ್ತಾ ನಾನು ವಿದೇಶಿ ಆಟಗಾರ ಅಂತ? ಎನ್ನುತ್ತಾ ನಾಗ್ಸ್ ಅವರನ್ನೇ ಪ್ರಶ್ನೆ ಮಾಡ್ತಾರೆ. ಆಗ ನಾಗ್ಸ್ ಇಲ್ಲ, ಖಂಡಿತಾ ಇಲ್ಲ ಅನ್ನುತ್ತಲೇ ಮುಗುಳು ನಗುತ್ತಾರೆ. ಅಲ್ಲದೇ ಈ ಸಂದರ್ಶನದಲ್ಲಿ ಕೊಹ್ಲಿಯ ಹೇರ್ ಕಟಿಂಗ್, ಟ್ಯಾಟೂಗಳ ಬಗ್ಗೆಯೂ ಡೀಪಾಗಿ ಪ್ರಶ್ನೆ ಮಾಡಿ ಕೊಹ್ಲಿಯನ್ನ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡ್ತಾರೆ ನಾಗ್ಸ್, ಒಟ್ನಲ್ಲಿ ಈ ವಿಡಿಯೋ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿದ್ದು, ಕೆಲ ಗಂಟೆಗಳಲ್ಲೇ ವೈರಲ್ ಆಗ್ತಿದೆ.
