ಉದಯವಾಹಿನಿ, ಈ ಕ್ಷಣ ಹೀಗೆಯೇ ಕೊನೆಗೊಂಡರೆ? ಆ ಎಲೆ ಹಾರಿಹೋದರೆ? ಆದರೆ, ಎಲೆ ಇಲ್ಲಿ ಹಾರುವುದಿಲ್ಲ. ಆದರೆ ಏನೋ ಸಂಭವಿಸುತ್ತದೆ. ಪ್ರೀತಿ ಯಾವಾಗಲೂ ಹಾಗೆಯೇ, ಬೇರ್ಪಟ್ಟ ಪ್ರೀತಿ, ಒಂದಾಗುವ ಪ್ರೀತಿಗಿಂತ ಹೆಚ್ಚು ಕಾಲ ಬದುಕಬಲ್ಲದು. ದ್ವೇಷ , ಇರಿತದ ಗಾಯಗಳು, ಯಾವುದೂ ಇಲ್ಲದೆ ನಿಮ್ಮ ಮನಸ್ಸಿಗೆ ಮುದ ನೀಡುವಂತೆ ಮಾಡುವ ಚಿತ್ರವನ್ನು ನೋಡಲು ನೀವು ಬಯಸುವಿರಾ? ಹಾಗಾದ್ರೆ ಮಿಸ್ ಮಾಡಿಕೊಳ್ಳದೆ ಈ ಚಿತ್ರವನ್ನು ನೋಡಿ ಈವನ್ ಇಫ್ ದಿಸ್ ಲವ್ ಡಿಸಪಿಯರ್ಸ್ ಟುನೈಟ್’ ಇದೊಂದು ಕೊರಿಯನ್ ಚಿತ್ರವಾಗಿದ್ದು, ಇದು ನೆಟ್‌ಫ್ಲಿಕ್ಸ್ OTT ನಲ್ಲಿ ಲಭ್ಯವಿದೆ. ಈ ಚಿತ್ರವನ್ನು ತಮಿಳು, ತೆಲುಗು, ಹೀಗೆ ಬೇರೆ ಬೇರೆ ಭಾಷೆ ಡಬ್ಬಿಂಗ್‌ನಲ್ಲಿಯೂ ವೀಕ್ಷಿಸಬಹುದು. ಇನ್ನು ಚಿತ್ರದ ಕಥೆಯ ಬಗ್ಗೆ ಹೇಳುವುದಾದರೆ, ನಾಯಕ ಕಿಮ್ ಜೇ-ವೋನ್ (ಸೂ ಯಂಗ್-ವೂ) ಶಾಲೆಯಲ್ಲಿ ಓದುತ್ತಿರುತ್ತಾನೆ. ಹೀಗಿರುವಾಗ ಒಂದು ದಿನ ಶಾಲೆಯಲ್ಲಿ, ಕೆಲವರು ತನ್ನ ಸ್ನೇಹಿತನ ಸೀಟಿಗೆ ಕಸ ಎಸೆದು ಅವನಿಗೆ ತೊಂದರೆ ಕೊಡುತ್ತಾರೆ. ಕಿಮ್ ಜೇ-ವೋನ್ ಅದನ್ನು ಪ್ರಶ್ನಿಸುತ್ತಾನೆ. ಆಗ ಆ ಗ್ಯಾಂಗ್ ಕಿಮ್ ಜೇ-ವೊನ್‌ಗೆ ಒಂದು ಟಾಸ್ಕ್ ನೀಡುತ್ತಾರೆ. ಆ ಒಂದು ಟಾಸ್ಕ್ ನಿಂದಾಗಿ ಸಂಪೂರ್ಣ ಕಥೆ ಮುಂದುವರಿಯುತ್ತದೆ. ಈ ಸಮಯದಲ್ಲಿ ನಟ ತನ್ನ ಶಾಲೆಯ ಅತ್ಯಂತ ಸುಂದರ ಹುಡುಗಿ ಶಿನ್ ಶಿ (ಹಾನ್ ಸಿಯೋ-ಯೂನ್) ಳನ್ನು ಭೇಟಿಯಾಗುತ್ತಾನೆ . ಇಲ್ಲಿಂದ ಕಥೆ ಆರಂಭವಾಗುತ್ತದೆ, ಮತ್ತು ಕಿಮ್ ಜೇ-ವೊನ್‌ಗೆ ನೀಡುವ ಟಾಸ್ಕ್ ಕಿಮ್ ಜೇ-ವೊನ್‌ನ ಜೀವನವನ್ನು ಬದಲಾಯಿಸುತ್ತದೆ. ಕಿಮ್ ಜೇ-ವೊನ್ ಮತ್ತು ಶಿನ್ ಶಿ ಪ್ರೀತಿಯಲ್ಲಿ ಬೀಳುವ ಸಮಯ ಅವರಿಗೆ ಆ ಒಂದು ಗುಪ್ತ ಟಾಸ್ಕ್ ನೀಡಲಾಗುತ್ತದೆ. ಅದು ಏನು? ಕೊನೆಯಲ್ಲಿ ಏನಾಗುತ್ತದೆ ಎಂಬುದು ಚಿತ್ರದ ಕಥೆ.

Leave a Reply

Your email address will not be published. Required fields are marked *

error: Content is protected !!