ಉದಯವಾಹಿನಿ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ತುಂಬಾನೆ ಖುಷಿನೂ ಆಗಿದೆ. ಅದರ ಬೆನ್ನಲ್ಲಿಯೇ ಬೇಸರ ಕೂಡ ಆಗಿದೆ. ಈ ಮಿಕ್ಸ್ ಫೀಲಿಂಗ್ ಬರೋದಕ್ಕೆ ಕಾರಣವೂ ಇದೆ. ಅದೇನು ಅಂದ್ರೆ, ಆರ್ಟ್ ಫ್ರಮ್ ದಿ ಹಾರ್ಟ್ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಮೇಲೆ ತಮಗೆ ಅನಿಸಿರೋದನ್ನ ಹೇಳಿಕೊಂಡಿದ್ದಾರೆ. ಬೆಂಗಳೂರಿನ ಚಿತ್ರಕಲಾ ಪರಿಷತ್ ಅಲ್ಲಿ ಆರ್ಟ್ ಫ್ರಮ್ ದಿ ಹಾರ್ಟ್ ಚಿತ್ರಕಲಾ ಪ್ರದರ್ಶನ ಶುರು ಆಗಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಇದಕ್ಕೆ ಚಾಲನೆ ಕೊಟ್ಟಿದ್ದಾರೆ. ಇದರೊಟ್ಟಿಗೆ ಇನ್ನು ಕೆಲವು ವಿಚಾರ ಹೇಳಿಕೊಂಡಿದ್ದಾರೆ. ಅದರ ಇನ್ನಷ್ಟು ವಿವರ
ಆರ್ಟ್ ಫ್ರಮ್ ದಿ ಹಾರ್ಟ್ ಅನ್ನೋದು ಚಿತ್ರಕಲೆಯ ವಿಶೇಷ ಪ್ರದರ್ಶನವೇ ಆಗಿದೆ. ವಿಶೇಷ ಚೇತನ ಕಲಾವಿದರ ಚಿತ್ರ ಕಲಾ ಪ್ರದರ್ಶನ ಇದಾಗಿದೆ. ಈ ಒಂದು ಕಾರ್ಯಕ್ರಮಕ್ಕೆ ಚಾಲನೆ ಕೊಟ್ಮೇಲೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಾತನಾಡಿದ್ದಾರೆ.
ಇವರ ಮಾತುಗಳು ಈ ರೀತಿ ಇವೆ; ಇದು ಒಳ್ಳೆಯ ಕಾರ್ಯಕ್ರಮ, ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ. ಕಲೆಗೆ ಧರ್ಮ, ಗಡಿ ಅನ್ನೋದು ಇರೋದಿಲ್ಲ. ಹಾಗಾಗಿಯೇ ಇದು ಒಳ್ಳೆಯ ಕೆಲಸವೇ ಆಗಿದೆ. ಪ್ರತಿಭಾನ್ವಿತ ವಿಶೇಷತ ಚೇತನರು ತಮ್ಮ ಟ್ಯಾಲೆಂಟ್ ಇಲ್ಲಿ ತೋರಿಸಬಹುದು.
ಅರ್ಧ ಖುಷಿ ಅರ್ಧ ಬೇಸರ: ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೆಚ್ಚಾಗಿ ಮಾತನಾಡೋದಿಲ್ಲ. ಆದರೆ, ಈ ಒಂದು ಆರ್ಟ್ ಫ್ರಮ್ ದಿ ಹಾರ್ಟ್ ಕಾರ್ಯಕ್ರಮಕ್ಕೆ ಬಂದಿರೋದು ಇವರಿಗೆ ಖುಷಿನೂ ಕೊಟ್ಟಿದೆ.
