ಉದಯವಾಹಿನಿ, ಬಾಲಿವುಡ್​ನಲ್ಲಿ ಶ್ರೀಲೀಲಾ ನಟನೆಯ ಮೊದಲ ಸಿನಿಮಾ 2026 ರ ದೀಪಾವಳಿಗೆ ಬರಬೇಕಿತ್ತು. ಆದರೆ ಯಶ್ ನಟನೆಯ ರಾಮಾಯಣ ದೀಪಾವಳಿಗೆ ಬಂದರೆ ಹಾಗು ಮೋಹನ್ ಲಾಲ್ ನಟನೆಯ ದೃಶ್ಯಂ 3 ಎಪ್ರಿಲ್ ಗೆ ರಿಲೀಸಾಗ್ತಿದೆ. ಈ ಗ್ಯಾಪ್ ನಡುವೆಯೇ ಶ್ರೀಲೀಲಾ ಮೊದಲ ಬಾಲಿವುಡ್ ಸಿನಿಮಾ ಬಿಡುಗಡೆ ಆಗಲಿದ್ದು ಮೇ ತಿಂಗಳಲ್ಲಿ ತೆರೆ ಮೇಲೆ ಬರೋದು ಫಿಕ್ಸ್ ಆಗಿದೆ.
ಈ ಮೂಲಕ ಶ್ರೀಲೀಲಾ ಮೊದಲ ಬಾಲಿವುಡ್ ಡೆಬ್ಯೂ ರಿಲೀಸ್ ಗೆ ಕೊನೆಗು ಟೈಂ ಕೂಡಿ ಬಂದಿದೆ. ಕಿಸ್ ಬ್ಯೂಟಿಯ ಮೊದಲ ಹಿಂದಿ ಸಿನಿಮಾ ಬಗ್ಗೆ ಅವರ ಕನ್ನಡದ ಅಭಿಮಾನಿಗಳೂ ಕೂಡಾ ಎಕ್ಸೈಟ್ ಆಗಿದ್ದಾರೆ.
ಅಂತೂ ಇಂತೂ ಈ ವರ್ಷವು ಶ್ರೀಲೀಲಾ ಅದೃಷ್ಟವೂ ಕೈ ಕೊಟ್ಟಿದೆ. ಟಿ ಟೌನ್​ನಲ್ಲಿ ಧಮಾಕ ಸೃಷ್ಟಿಸಿದ್ದ ಹುಡುಗಿ ಕಿಸಕ್ ಅಂತ ಕುಣಿದಿದ್ದ ಹುಡುಗಿ, ಬಿ ಟೌನ್ ನಲ್ಲಿ ಇನ್ನೇನು ಮೊದಲ ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿಯಬೇಕು ಅನ್ನುವ ಸಮಯದಲ್ಲಿಯೇ ಪವನ್ ಕಲ್ಯಾಣ್ ಜೊತೆಗೆ ನಟಿಸಿದ್ದ ಉಸ್ತಾದ್ ಭಗತ್ ಸಿಂಗ್ ಬಾಕ್ಸಾಫೀಸಲ್ಲಿ ಸೋತಿದೆ.

ಈ ವರ್ಷದ ಆರಂಭದಲ್ಲಿ ಪರಾಶಕ್ತಿ ಮೂಲಕ ತಮಿಳಿನಲ್ಲಿ ಶ್ರೀಲೀಲಾ ಮನೆ ಮಗಳಂತೆ ಶಿವಕಾರ್ತಿಕೇಯ ಜೊತೆಗೆ ನಟಿಸಿದ್ದರು. ಅಮರನ್ ನಂತರ ಶಿವ ಕಾರ್ತಿಕೇಯನ್ ಪರಾಶಕ್ತಿ ಮೂಲಕ ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್ ಕೊಡ್ತಾರೆ ಅಂತಿದ್ದರೆ ಆ ಸಿನಿಮಾ ಬಾಕ್ಸಾಫೀಸಲ್ಲಿ ಅಷ್ಠೇನು ಜಾದು ಮಾಡಲಿಲ್ಲ.ಬಿ ಟೌನ್ ಪಾಲಿಗೆ ಕಾರ್ತಿಕ್ ಆರ್ಯನ್ ಬ್ಯಾಂಕೆಬಲ್ ನಟ. ಅವರ ಸಿನಿಮಾ ಗಳಿಕೆಯಲ್ಲಿ ಹಿಂದೆ ಬೀಳಲ್ಲ. ಕಾರ್ತಿಕ್ ನಟನೆಯ ಬೂಲ್ ಭೂಲಯ್ಯ 2, 266 ಕೋಟಿ ಗೆದ್ದಿದ್ದರೆ , ಬೂಲ್ ಭೂಲಯ್ಯ 3 423 ಕೋಟಿ ಕಲೆಕ್ಷನ್ ಮಾಡಿತ್ತು. ಬಿ ಟೌನ್ ನಲ್ಲಿ ಖಾನ್​ಗಳ ಸಿನಿಮಾವೇ ನಿಲ್ಲಲ್ಲ ಅನ್ನೋ ಸಮಯದಲ್ಲಿ ಕಾರ್ತಿಕ್ ಆರ್ಯನ್ ಸಿನಿಮಾ 200 ಕೋಟಿ ಗಳಿಸೋದು ಗ್ಯಾರಂಟಿ ಅನ್ನೋದು ಸಿನಿ ಪಂಡಿತರ ಮಾತು.

Leave a Reply

Your email address will not be published. Required fields are marked *

error: Content is protected !!