ಉದಯವಾಹಿನಿ, ರಣವೀರ್ ಸಿಂಗ್ (ನಟನೆಯ ಧುರಂಧರ್-2 ಸಿನಿಮಾ ಬಾಕ್ಸಾಫೀಸ್ ಚಿಂದಿ ಉಡಾಯಿಸ್ತಾ ಇದೆ. ಬಿಡುಗಡೆಯಾಗಿ 2 ವಾರ ಕಳೆದರೂ ಸಹ ಈ ಸಿನಿಮಾದ ಅಬ್ಬರ ಆರ್ಭಟ ಒಂಚೂರು ಕಡಿಮೆ ಆಗ್ತಾನೆ ಇಲ್ಲ. 3 ಗಂಟೆ 49 ನಿಮಿಷ ಇರೋ ಸಿನಿಮಾ ಒಂದು ಕ್ಷಣ ಕೂಡ ಬೋರ್ ಹೊಡೆಸ್ತಿಲ್ಲ ಅನ್ನೋದು ಸಿನಿಮಾವನ್ನ ನೋಡ್ತಿರೋ ಪ್ರೇಕ್ಷಕರು ಹೇಳ್ತಿರೋ ಮಾತು.
ಇನ್ನು ಧುರಂಧರ್2 ಬಾಕ್ಸಾಫೀಸ್ ದಾಖಲೆ ಮೇಲೆ ದಾಖಲೆ ಬರೀತಾ ಇದೆ. 16 ದಿನಗಳಲ್ಲಿ ಈ ಸಿನಿಮಾ 1525 ಕೋಟಿ ಗಳಿಸಿದೆ. ಸದ್ಯದ ವೇಗ ನೋಡ್ತಾ ಇದ್ರೆ ಈ ವಾರದ ಕೊನೆ ಅಷ್ಟರಲ್ಲಿ 1700 ಕೋಟಿ ಗಳಿಸೋ ಸಾಧ್ಯತೆ ಇದ್ದು, ಶನಿವಾರ ಭಾನುವಾರ ಮುಗಿಯೋ ಅಷ್ಟರಲ್ಲಿ 1800 ಕೋಟಿ ಕ್ಲಬ್ ಸೇರೋದು ಪಕ್ಕಾ ಎನ್ನುವ ಹಾಗಾಗಿದೆ.
ಧುರಂದರ್-2ಗೆ ಇನ್ನುಳಿದಿರೋದು ಬಾಹುಬಲಿ 2 ಹಾಗೂ ದಂಗಲ್ ಸಿನಿಮಾಗಳು ಮಾತ್ರ. ಸದ್ಯಕ್ಕೆ ಯಾವುದೇ ದೊಡ್ಡ ಸಿನಿಮಾ ಬಿಡುಗಡೆಗೆ ರೆಡಿ ಇಲ್ಲ. ಹೀಗಾಗಿ ಲಾಂಗ್ ರನ್ ನಲ್ಲಿ ಏನಾದರೂ ಧುರಂಧರ್2 ಇದೇ ರೀತಿ ಪರ್ಫಾಮ್ ಮಾಡಿದ್ದೇ ಆದರೆ ಬಾಹುಬಲಿ-2, ದಂಗಲ್ ಸಿನಿಮಾ ದಾಖಲೆ ಗಳು ಸಹ ಸೇಫ್ ಅಲ್ಲ ಎನ್ನಬಹುದು.
ಒಟಿಟಿ ಯುಗದಲ್ಲಿ ಜನ ಥಿಯೇಟರ್ ಬರೋದೆ ಕಷ್ಟ ಎನ್ನುವಾಗ ಸಿನಿಮಾವೊಂದು ಈ ಪರಿ ಜನರನ್ನ ಸೆಳೆಯುತ್ತಿರೋದು ಖುಷಿಯ ವಿಚಾರವೇ ಸರಿ.

Leave a Reply

Your email address will not be published. Required fields are marked *

error: Content is protected !!