
ಉದಯವಾಹಿನಿ, ನಾಸಿಕ್(ಮಹಾರಾಷ್ಟ್ರ): ನಾಸಿಕ್‌ನ ಟಿಸಿಎಸ್ ಶಾಖೆಯಲ್ಲಿ ಲೈಂಗಿಕ ಕಿರುಕುಳ, ಬಲವಂತದ ಮತಾಂತರ ಆರೋಪ ಪ್ರಕರಣಗಳಲ್ಲಿ ಪೊಲೀಸರು ಇತ್ತೀಚಿಗೆ ಹಲವರನ್ನು ಬಂಧಿಸಿದ್ದಾರೆ. ಈ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಪೊಲೀಸರು ಅಚ್ಚರಿಯ ವಿಚಾರಗಳನ್ನು ಬಯಲಿಗೆಳೆದಿದ್ದಾರೆ.ಕೃತ್ಯಕ್ಕೆ HR, AGM ಸಹಕಾರ!: ತಮಗೆ ಮೇಲಾಧಿಕಾರಿಗಳು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ತಿಳಿಸಿ ಮಹಿಳಾ ಸಿಬ್ಬಂದಿ ಕಳುಹಿಸಿದ್ದ 70ಕ್ಕೂ ಹೆಚ್ಚು ಸಂದೇಶಗಳನ್ನು ಮಾನವ ಸಂಪನ್ಮೂಲ ವ್ಯವಸ್ಥಾಪಕಿ ಮತ್ತು ಸಹಾಯಕ ಪ್ರಧಾನ ವ್ಯವಸ್ಥಾಪಕ(ಎಜಿಎಮ್) ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿರುವುದು ಇದೀಗ ಬೆಳಕಿಗೆ ಬಂದಿದೆ. ಈ ಮೂಲಕ ಇಬ್ಬರೂ ದುಷ್ಕೃತ್ಯಕ್ಕೆ ಸಹಕರಿಸಿದ ಗಂಭೀರ ವಿಚಾರ ಬಯಲಾಗಿದೆ.
ಮಹಿಳಾ ಸಿಬ್ಬಂದಿ ಪದೇ ಪದೇ ನೀಡುತ್ತಿದ್ದ ದೂರುಗಳನ್ನು ನಿರ್ಲಕ್ಷಿಸಿ, ಅವುಗಳನ್ನು ಕಂಪನಿಯ ಉನ್ನತ ಮಟ್ಟದ ಅಧಿಕಾರಿಗಳಿಗೆ ರವಾನಿಸದೇ ಸುಮ್ಮನಾಗಿದ್ದರು ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ಬುಧವಾರ ತಿಳಿಸಿದೆ.
HR ನಿದಾ ಖಾನ್ ಮಾಸ್ಟರ್ ಮೈಂಡ್!: ಪೊಲೀಸರು ಹೇಳುವಂತೆ, ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕಿ(HR) ನಿದಾ ಖಾನ್ ದೂರುಗಳಿಗೆ ಸೂಕ್ತವಾಗಿ ಸ್ಪಂದಿಸಿ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯವಹಿಸಿದ್ದಷ್ಟೇ ಅಲ್ಲ, ಆರೋಪಿಗಳನ್ನು ರಕ್ಷಿಸಲು ‘ಮಾಸ್ಟರ್ ಮೈಂಡ್’ ರೀತಿಯಲ್ಲಿ ವರ್ತಿಸಿರುವುದನ್ನು ಪೊಲೀಸರು ಕಂಡುಕೊಂಡಿದ್ದಾರೆ. ಇಂಥ ದುಷ್ಕೃತ್ಯಕ್ಕೆ ಆರೋಪಿಗಳಿಗೆ ಹಣಕಾಸಿನ ನೆರವು ಸಿಗುತ್ತಿತ್ತೇ?- ತನಿಖೆ ತೀವ್ರ: ತನಿಖೆಯ ವೇಳೆ, ಪೊಲೀಸ್ ಅಧಿಕಾರಿಗಳು ಆರೋಪಿಗಳ ನಡುವೆ ವಿನಿಮಯವಾದ ಸುಮಾರು 78 ಅನುಮಾನಾಸ್ಪದ ಫೋನ್ ಕರೆ ದಾಖಲೆಗಳು, ಇಮೇಲ್ ಮತ್ತು ಚಾಟ್‌ಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ. ಇದರಲ್ಲಿ ಹಣಕಾಸು ವಹಿವಾಟಿನ ಪುರಾವೆಗಳೂ ಸಹ ಪೊಲೀಸರಿಗೆ ಸಿಕ್ಕಿವೆ. ಹಾಗಾಗಿ, ಇಂಥ ದುಷ್ಕೃತ್ಯಕ್ಕಾಗಿ ಆರೋಪಿಗಳಿಗೆ ಹಣಕಾಸಿನ ನೆರವು ಸಿಗುತ್ತಿತ್ತೇ ಎಂಬುದರ ಕುರಿತು ತನಿಖೆ ಸಾಗುತ್ತಿದೆ.
ಸಂತ್ರಸ್ತ ಮಹಿಳಾ ಉದ್ಯೋಗಿಗಳಿಗೆ ತಾವು ನೀಡಿದ ದೂರುಗಳನ್ನೇ ಕೈಬಿಡುವಂತೆ ನಿದಾ ಖಾನ್ ಪದೇ ಪದೇ ಸಲಹೆ ನೀಡಿರುವುದೂ ಗೊತ್ತಾಗಿದೆ. ಈಕೆ ಕಚೇರಿಯ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ(POSH ) ಸಮಿತಿಯ ಸದಸ್ಯೆಯಾಗಿದ್ದೂ ಆರೋಪಿಗಳ ವಿರುದ್ಧ ಯವುದೇ ಕಠಿಣ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ತಂಡ ಕಟ್ಟಿಕೊಂಡು ವ್ಯವಸ್ಥಿತವಾಗಿ ಒಂದು ಕೋಮಿನ ಮಹಿಳಾ ಸಿಬ್ಬಂದಿ ಟಾರ್ಗೆಟ್: ಈ ನಡುವೆ, ಟಿಸಿಎಸ್ ಶಾಖೆಯ ಎಜಿಎಂ ಪ್ರಕರಣ ದಾಖಲಾದ ನಂತರವೂ ಮೂರನೇ ಆರೋಪಿ ಮತ್ತು ಕಂಪನಿಯ ಸಿಬ್ಬಂದಿ ಡ್ಯಾನಿಶ್ ಶೇಖ್ ಎಂಬಾತನೊಂದಿಗೆ ಸಂಪರ್ಕದಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧನಕ್ಕೂ ಮೊದಲು ಶೇಖ್‌ಗೆ ಕರೆ ಮಾಡಿದ್ದಾನೆ ಎಂಬುದು ಗೊತ್ತಾಗಿದೆ. ಹಾಗಾಗಿ, ತಂಡ ಕಟ್ಟಿಕೊಂಡು ವ್ಯವಸ್ಥಿತವಾಗಿ ಒಂದು ಕೋಮಿನ ಮಹಿಳಾ ಸಿಬ್ಬಂದಿಯ ಮೇಲೆ ದೌರ್ಜನ್ಯ ಎಸಗುತ್ತಿದ್ದುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಕುರಿತೂ ತನಿಖೆ ತೀವ್ರಗೊಂಡಿದೆ.
