ಉದಯವಾಹಿನಿ, ವಾಷಿಂಗ್ಟನ್‌: ಇರಾನ್ ಜೊತೆ ಎರಡನೇ ಸುತ್ತಿನ ನೇರ ಮಾತುಕತೆ ಮುಂದಿನ ಎರಡು ದಿನಗಳಲ್ಲಿ ಪಾಕಿಸ್ತಾನದಲ್ಲಿ ನಡೆಯಬಹುದು ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ತಿಳಿಸಿದ್ದಾರೆ.
ಎರಡನೇ ಸುತ್ತಿನ ಮಾತುಕತೆ ಯುರೋಪ್‌ನಲ್ಲಿ ನಡೆಯುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ, ಮುಂದಿನ ಎರಡು ದಿನಗಳಲ್ಲಿ ಪಾಕ್‌ನ ಇಸ್ಲಾಮಾಬಾದ್‌ನಲ್ಲಿಯೇ ಮಾತುಕತೆ ನಡೆಯಲಿದೆ ಎನ್ನಲಾಗಿದೆ. ನಾವು ಅಲ್ಲಿಗೆ ಹೋಗಲು ಹೆಚ್ಚು ಒಲವು ತೋರುತ್ತೇವೆ ಎಂದು ಟ್ರಂಪ್‌ ಹೇಳಿದ್ದಾರೆ.
ಮುಂದಿನ ಸುತ್ತಿನ ಮಾತುಕತೆಯಲ್ಲಿ ಅಮೆರಿಕವನ್ನು ಯಾರು ಪ್ರತಿನಿಧಿಸುತ್ತಾರೆಂದು ಟ್ರಂಪ್‌ ಸ್ಪಷ್ಟಪಡಿಸಿಲ್ಲ. ಆದರೆ, ಸ್ವತಃ ತಾವೇ ಭಾಗಿಯಾಗುವ ಸಾಧ್ಯತೆಯನ್ನು ಟ್ರಂಪ್‌ ತಳ್ಳಿಹಾಕಿದ್ದಾರೆ. ಮೊದಲ ಸುತ್ತಿನ ಮಾತುಕತೆಯಲ್ಲಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಅಧ್ಯಕ್ಷರ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ಅಮೆರಿಕದ ರಾಜತಾಂತ್ರಿಕರ ತಂಡದ ನೇತೃತ್ವ ವಹಿಸಿದ್ದರು. ಆದರೆ, ಮಾತುಕತೆ ವಿಫಲವಾಗಿತ್ತು.

ಇರಾನ್‌ ಪರಮಾಣು ಹೊಂದುವುದನ್ನು ನಿಲ್ಲಿಸಬೇಕು ಹಾಗೂ ಹಾರ್ಮುಜ್‌ ಜಲಸಂಧಿಯನ್ನು ಮುಕ್ತಗೊಳಿಸಬೇಕು ಎಂಬುದು ಅಮೆರಿಕದ ಪ್ರಮುಖ ಷರತ್ತಾಗಿದೆ. ಆದರೆ, ಅಮೆರಿಕದ ಷರತ್ತಿಗೆ ಇರಾನ್‌ ಒಪ್ಪುತ್ತಿಲ್ಲ. ಹೀಗಾಗಿ, ಮೊದಲ ಸುತ್ತಿನ ಸಂಧಾನ ಮಾತುಕತೆ ವಿಫಲವಾಯಿತು.

Leave a Reply

Your email address will not be published. Required fields are marked *

error: Content is protected !!