ಉದಯವಾಹಿನಿ, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇರಾನ್ ಮತ್ತು ಅಮೆರಿಕಾ ನಡುವಿನ ಮಾತಿನ ಸಮರ ಮತ್ತಷ್ಟು ತೀವ್ರಗೊಂಡಿದೆ. ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕಾ ಜಾರಿಗೊಳಿಸಿರುವ ನೌಕಾ ದಿಗ್ವಂಧನವನ್ನು ಹಿಂಪಡೆಯದಿದ್ದರೆ ಗಲ್ಫ್ ಪ್ರದೇಶದ ವ್ಯಾಪಾರವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ.
ಇರಾನ್‌ನ ಸೈನಿಕ ವಲಯದ ಹಿರಿಯ ಅಧಿಕಾರಿಗಳು, ಅಮೆರಿಕಾ ಹಡಗುಗಳು ಜಲಸಂಧಿ ನಿಯಂತ್ರಣಕ್ಕೆ ಮುಂದಾದರ ಅವು ಕ್ಷಿಪಣಿಗಳ ನೇರ ಗುರಿಯಾಗಲಿವೆ ಎಂದು ಸ್ಪಷ್ಟವಾಗಿ ಎಚ್ಚರಿಸಿದ್ದಾರೆ.
ಜಾಗತಿಕ ತೈಲ ಸರಬರಾಜಿನ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯ ಮೂಲಕ ವಿಶ್ವದ ಸುಮಾರು 20 ಶೇಕಡಾ ತೈಲ ಸಾಗಾಟ ನಡೆಯುವುದರಿಂದ, ಈ ಬೆಳವಣಿಗೆ ಜಾಗತಿಕ ಮಾರುಕಟ್ಟೆಗಳಿಗೆ ಆತಂಕ ಉಂಟುಮಾಡಿದೆ.ಇದಕ್ಕೆ ವಿರುದ್ಧವಾಗಿ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ಧ ಶೀಘ್ರವೇ ಅಂತ್ಯಗೊಳ್ಳುವ ಹಂತಕ್ಕೆ ಬಂದಿದೆ ಎಂದು ಹೇಳಿರುವುದು ಪರಿಸ್ಥಿತಿಯಲ್ಲಿನ ವಿರೋಧಾಭಾಸವನ್ನು ತೋರಿಸಿದೆ. ಒಂದೆಡೆ ಯುದ್ಧ ವಿರಾಮ ಮತ್ತು ಮಾತುಕತೆಗಳ ಪ್ರಯತ್ನಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಕಠಿಣ ಹೇಳಿಕೆಗಳು ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುತ್ತಿವೆ.

Leave a Reply

Your email address will not be published. Required fields are marked *

error: Content is protected !!