ಉದಯವಾಹಿನಿ, ಇರಾನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ಎದ್ದಿದ್ದ ವದಂತಿಗಳಿಗೆ ಚೀನಾ ಅಧಿಕೃತವಾಗಿ ತೆರೆ ಎಳೆದಿದೆ. “ನಾವು ಇರಾನ್‌ಗೆ ಯಾವುದೇ ರೀತಿಯ ಯುದ್ಧೋಪಕರಣಗಳನ್ನು ಒದಗಿಸುತ್ತಿಲ್ಲ” ಎಂದು ಚೀನಾ ಸ್ಪಷ್ಟಪಡಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ‘ಟೂತ್ ಸೋಷಿಯಲ್’ ಖಾತೆಯಲ್ಲಿ ಕುತೂಹಲಕಾರಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಇರಾನ್‌ಗೆ ಶಸ್ತ್ರಾಸ್ತ್ರ ನೀಡುವುದಿಲ್ಲ ಎಂದು ಚೀನಾ ಒಪ್ಪಿಕೊಂಡಿರುವುದಕ್ಕೆ ಟ್ರಂಪ್ ಹರ್ಷ ವ್ಯಕ್ತಪಡಿಸಿದ್ದಾರೆ.
“ನಾನು ಹಾರ್ಮುಜ್ ಜಲಸಂಧಿಯನ್ನು ಕಾಯಂ ಆಗಿ ಮುಕ್ತಗೊಳಿಸಲು ಮುಂದಾಗಿರುವುದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ತುಂಬಾ ಸಂತೋಷ ತಂದಿದೆ. ಕೆಲವೇ ವಾರಗಳಲ್ಲಿ ನಾನು ಅಲ್ಲಿಗೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಕ್ಷಿ ಅವರು ನನ್ನನ್ನು ಆತ್ಮೀಯವಾಗಿ ಅಪ್ಪಿಕೊಳ್ಳಲಿದ್ದಾರೆ ಎಂಬ ನಂಬಿಕೆ ನನಗಿದೆ. ನಾವಿಬ್ಬರೂ ಪರಸ್ಪರ ಬುದ್ಧಿವಂತಿಕೆಯಿಂದ ಮತ್ತು ಉತ್ತಮವಾಗಿ ಕೆಲಸ ಮಾಡುತ್ತಿದ್ದೇವೆ,” ಎಂದು ಟ್ರಂಪ್ ಬರೆದುಕೊಂಡಿದ್ದಾರೆ. ಇರಾನ್‌ಗೆ ಶಸ್ತ್ರಾಸ್ತ್ರ ಪೂರೈಸುವ ರಾಷ್ಟ್ರಗಳ ವಿರುದ್ಧ ಟ್ರಂಪ್‌ ಇತ್ತೀಚೆಗಷ್ಟೇ ಕಠಿಣ ಎಚ್ಚರಿಕೆ ನೀಡಿದ್ದರು. ಟೆಹ್ರಾನ್‌ಗೆ ಆಯುಧ ಒದಗಿಸುವ ದೇಶಗಳ ಮೇಲೆ ತಕ್ಷಣವೇ 50% ರಷ್ಟು ಭಾರಿ ಸುಂಕ ವಿಧಿಸುವುದಾಗಿ ಕಳೆದ ವಾರ ಬೆದರಿಕೆ ಹಾಕಿದ್ದರು. ಈ ಆರ್ಥಿಕ ಹೊಡೆತಕ್ಕೆ ಹೆದರಿ ಚೀನಾ ಈಗ ತನ್ನ ನಿಲುವನ್ನು ಬದಲಿಸಿದೆಯೇ ಎಂಬ ಚರ್ಚೆಗಳು ಜಾಗತಿಕ ರಾಜಕೀಯ ವಲಯದಲ್ಲಿ ಆರಂಭವಾಗಿವೆ.

Leave a Reply

Your email address will not be published. Required fields are marked *

error: Content is protected !!