ಉದಯವಾಹಿನಿ, ನಟಿ ಮೃಣಾಲ್ ಠಾಕೂರ್‌ಗೆ ಬಾಲಿವುಡ್‌ನಿಂದ ಬೇಸರವಾಗಿದ್ಯಂತೆ! ಹೌದು, ಸನ್ ಆಫ್ ಸರ್ದಾರ್ ಟೀಂನಿಂದ ಮೃಣಾಲ್ ಬೇಸರದಲ್ಲಿದ್ದಾರೆ. ಇಡೀ ಬಾಲಿವುಡ್ ಮೇಲೆಯೇ ನಂಬಿಕೆ ಕಳೆದುಕೊಂಡಿದ್ದಾರೆ. ಈ ಸಿನಿಮಾದಲ್ಲಿ ಮೃಣಾಲ್ ಪತಿಯ ಪಾತ್ರದಲ್ಲಿ ಹಿರಿಯ ನಟ ಚಂಕಿ ಪಾಂಡೆ ಕಾಣಿಸಿಕೊಂಡಿದ್ದಾರೆ. ಸಿನಿಮಾ ಆರಂಭಕ್ಕೂ ಮುನ್ನ ತನ್ನ ಗಂಡನ ಪಾರ್ಟ್‌ನಲ್ಲಿ ಯಾರಿದ್ದಾರೆ ಎಂದು ಮೃಣಾಲ್‌ಗೆ ಹೇಳಿರಲಿಲ್ಲವಂತೆ. ಅವರು ಒಪ್ಪಿಕೊಂಡ ರಾಬಿಯಾ ಅಖರ್ ಪಾತ್ರಕ್ಕೂ ಆಮೇಲೆ ಸಿನಿಮಾದಲ್ಲಿ ಇದ್ದ ರಾಬಿಯಾ ಪಾತ್ರಕ್ಕೂ ತುಂಬಾ ವ್ಯತ್ಯಾಸ ಇದೆ. ನನ್ನ ವಯಸ್ಸೇನು ಅವರ ವಯಸ್ಸೇನು. ನಾನು ಬಾಲಿವುಡ್‌ನ್ನು ನಂಬಬಾರದು ಅನ್ನೋಕೆ ಇದೊಂದು ಪಾಠ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!