ಉದಯವಾಹಿನಿ, ಬಾಲಿವುಡ್‌ನಲ್ಲಿ ಮತ್ತೊಮ್ಮೆ ಹಾರರ್-ಕಾಮಿಡಿ ಹವಾ ಸೃಷ್ಟಿಸಲು ಸಜ್ಜಾಗಿರುವ ಅಕ್ಷಯ್ ಕುಮಾರ್ ಅವರ ‘ಭೂತ್ ಬಂಗ್ಲ’ ಚಿತ್ರ ಬಿಡುಗಡೆಗೂ ಮುನ್ನವೇ ಉತ್ತಮ ಚರ್ಚೆ ಹುಟ್ಟುಹಾಕಿದೆ. ನಿರ್ದೇಶಕ ಪ್ರಿಯದರ್ಶನ್ ಜೊತೆಗಿನ ಈ ಬಹುನಿರೀಕ್ಷಿತ ಸಿನಿಮಾ ಏಪ್ರಿಲ್ 17ರಂದು ತೆರೆಕಾಣಲಿದ್ದು, ಮುಂಗಡ ಟಿಕೆಟ್ ಬುಕ್ಕಿಂಗ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ.
ರಾಷ್ಟ್ರೀಯ ಮಲ್ಟಿಪ್ಲೆಕ್ಸ್ ಸರಣಿಗಳಾದ ಪಿವಿಆರ್ ಐನಾಕ್ಸ್ ಮತ್ತು ಸಿನಿಪೊಲಿಸ್‌ನಲ್ಲಿ ಈಗಾಗಲೇ 20 ಸಾವಿರ ಟಿಕೆಟ್‌ಗಳು ಮಾರಾಟವಾಗಿದ್ದು, ಪ್ರಿವ್ಯೂ ಶೋ 10,500 ಹಾಗೂ ಮೊದಲ ದಿನದ ಶೋಗೆ 9,000 ಟಿಕೆಟ್ ಮಾರಾಟ ಆಗಿರುವುದು ಚಿತ್ರಕ್ಕೆ ಪಾಸಿಟಿವ್ ಸಿಗ್ನಲ್ ನೀಡಿದೆ. ಬುಕ್ಕಿಂಗ್ ವೇಗ ಇದೇ ರೀತಿಯಲ್ಲಿ ಮುಂದುವರಿದರೆ ಮೊದಲ ದಿನ ಉತ್ತಮ ಓಪನಿಂಗ್ ಕಲೆಕ್ಷನ್ ಸಾಧ್ಯವೆಂದು ಟ್ರೇಡ್ ವಲಯ ಅಂದಾಜಿಸಿದೆ.
