ಉದಯವಾಹಿನಿ, ಕೋಲ್ಕತ್ತಾ : ಡೇಟಿಂಗ್ ಆ್ಯಪ್‌ ಮೂಲಕ 500 ಮಹಿಳೆಯರಿಗೆ ವಂಚಿಸಿದ್ದ ಕುಖ್ಯಾತ ವಂಚಕನನ್ನು ಬಂಧಿಸಲಾಗಿದೆ. ದಕ್ಷಿಣ-ಪಶ್ಚಿಮ ಜಿಲ್ಲೆ ಸೈಬರ್ ಪೊಲೀಸ್ ತಂಡವು ಆರೋಪಿಯನ್ನು ಬಂಧಿಸಿದೆ ದೇಶದಾದ್ಯಂತ ಮಹಿಳೆಯರನ್ನು ಗುರಿಯಾಗಿಸಿಕೊಂಡು ಹನಿ-ಟ್ರ್ಯಾಪಿಂಗ್, ರೋಮ್ಯಾನ್ಸ್ ಸ್ಕ್ಯಾಮ್ ಮತ್ತು ಆನ್‌ಲೈನ್ ಬ್ಲ್ಯಾಕ್‌ಮೇಲ್ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದ ಪಶ್ಚಿಮ ಬಂಗಾಳದ ಉತ್ತರ 24 ಪರ್ಗನಾಸ್ ನಿವಾಸಿ ಕುಖ್ಯಾತ ಸೈಬರ್ ವಂಚಕ ಆನಂದ್ ಕುಮಾರ್ (35) ಸದ್ಯ ಪೊಲೀಸರ ಬಲೆ ಬಿದ್ದಿದ್ದಾನೆ.

ಆರೋಪಿಯು ಡೇಟಿಂಗ್ ಮತ್ತು ವೈವಾಹಿಕ ವೇದಿಕೆಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಲ್ಲಿ ನಕಲಿ ಪ್ರೊಫೈಲ್‌ಗಳನ್ನು ಸೃಷ್ಟಿಸಿ, ವೈದ್ಯ, ಉದ್ಯಮಿ, ವಕೀಲ, ಚಲನಚಿತ್ರ ನಿರ್ಮಾಪಕ ಮತ್ತು ಇತರ ವೃತ್ತಿಪರರಂತೆ ನಟಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಗುರುತುಗಳನ್ನು ಬಳಸಿಕೊಂಡು ಸಂತ್ರಸ್ತರೊಂದಿಗೆ ವಿಶ್ವಾಸ ಬೆಳೆಸುತ್ತಿದ್ದ, ಭಾವನಾತ್ಮಕ ಸಂಬಂಧ ಹೊಂದುತ್ತಿದ್ದ. ಬಳಿಕ ವಿವಾಹ ಪ್ರಸ್ತಾಪ, ವೈದ್ಯಕೀಯ ತುರ್ತು ಪರಿಸ್ಥಿತಿ, ವ್ಯವಹಾರ ನಷ್ಟ ಮತ್ತು ವೃತ್ತಿಪರ ಅವಕಾಶಗಳು ಸೇರಿದಂತೆ ವಿವಿಧ ನೆಪಗಳ ಅಡಿಯಲ್ಲಿ ಹಣವನ್ನು ಸುಲಿಗೆ ಮಾಡುತ್ತಿದ್ದ.

ಆನಂದ್ ಕುಮಾರ್ 500ಕ್ಕೂ ಹೆಚ್ಚು ಮಹಿಳೆಯರನ್ನು ಗುರಿಯಾಗಿಸಿಕೊಂಡು ಸುಮಾರು 2 ಕೋಟಿ ರುಪಾಯಿ ವಂಚಿಸಿದ್ದಾನೆ ಅಥವಾ ಸುಲಿಗೆ ಮಾಡಿದ್ದಾನೆ ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಹಲವು ಸಂದರ್ಭಗಳಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಸಂವಹನದ ಸಮಯದಲ್ಲಿ ಹಂಚಿಕೊಂಡ ಖಾಸಗಿ ಫೋಟೊಗಳು ಮತ್ತು ವಿಡಿಯೊ ಮೂಲಕ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!